Home ಟಾಪ್ ಸುದ್ದಿಗಳು ಈ ರಾಜ್ಯದಲ್ಲಿನ್ನು ಲಸಿಕೆ ಪಡೆಯದವರಿಗೆ ರೇಷನ್ ಇಲ್ಲ!

ಈ ರಾಜ್ಯದಲ್ಲಿನ್ನು ಲಸಿಕೆ ಪಡೆಯದವರಿಗೆ ರೇಷನ್ ಇಲ್ಲ!

ಹೊಸದಿಲ್ಲಿ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.ಪ್ರತಿಯೊಬ್ಬ ರೇಷನ್ ಕಾರ್ಡದಾರರು ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ.

ಗ್ರಾಹಕರು ಈ ನಿಯಮ ಪಾಲಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಅದನ್ನು ಖಾತರಿಪಡಿಸುವುದು ರೇಷನ್ ಅಂಗಡಿಯವರ ಜವಾಬ್ದಾರಿಯಾಗಿದೆ ಎಂದು ಸರ್ಕಾರದ ಮಾರ್ಗಸೂಚಿ ತಿಳಿಸಿದೆ. ಪಡಿತರ ಚೀಟಿದಾರರು ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಪಡೆಯದಿದ್ದರೆ ಅಂಥವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಬಾರದು ಎಂದು ಹೊಸ ಆದೇಶ ತಿಳಿಸಿದೆ.

Join Whatsapp
Exit mobile version