ಬೆಂಗಳೂರು: ನಾಳೆ ಪಿಯುಸಿ ಫಲಿತಾಂಶವೆಂಬ ಸುದ್ದಿ ಸುಳ್ಳು ಹರಿದಾಡುತ್ತಿದೆ. ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕರಣೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ನಾಳೆ ಪಿಯುಸಿ ರಿಸಲ್ಟ್ ಇಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮೇ 18 ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಕರ್ನಾಟಕದಲ್ಲಿ ಮುಗಿದಿದ್ದವು. ಪರೀಕ್ಷೆ ಮುಗಿದ ಕೂಡಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೌಲ್ಯಮಾಪನಕ್ಕೆ ಚಾಲನೆ ನೀಡಲಾಯಿತು. ನೋಂದಣಿ ಮಾಡಿದ ಪ್ರಾಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಕಾರಣ ಪರೀಕ್ಷೆ ಫಲಿತಾಂಶ ಪ್ರಕಟದಲ್ಲಿ ವಿಳಂಬವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೊದಲೇ ಮಾಹಿತಿ ನೀಡಿತ್ತು.
ಆದ್ದರಿಂದ ತಕ್ಷಣಕ್ಕೆ ಪಿಯುಸಿ ಫಲಿತಾಂಶ ಇಲ್ಲ ಎಂದ ಬಿಸಿ ನಾಗೇಶ್ ಫಲಿತಾಂಶದ ದಿನ ನಾಳೆ ಮಾಧ್ಯಮಗಳ ಮೂಲಕ ತಿಳಿಸುತ್ತೇನೆ ಎಂದು ಹೇಳಿದ್ದಾರೆ.