Home ಟಾಪ್ ಸುದ್ದಿಗಳು UPI ಪಾವತಿಗಳಿಗೆ ಶುಲ್ಕ ವಿಧಿಸುವ ಚಿಂತನೆ ಇಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

UPI ಪಾವತಿಗಳಿಗೆ ಶುಲ್ಕ ವಿಧಿಸುವ ಚಿಂತನೆ ಇಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

ನವದೆಹಲಿ: UPI ಪಾವತಿಗಳಿಗೆ ಯಾವುದೇ ರೀತಿಯ ಸೇವಾ ಶುಲ್ಕ ವಿಧಿಸುವ ಚಿಂತನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಡಿಜಿಟಲ್ ಪಾವತಿಯನ್ನು ಸರಕಾರ ಪ್ರೋತ್ಸಾಹಿಸುತ್ತದೆ. ಆದರೆ ಡಿಜಿಟಲ್ ಪೇಮೆಂಟ್ ನಡೆಸುವ ಕಂಪೆನಿಗಳಿಗೆ ಉಂಟಾಗುವ ಖರ್ಚುವೆಚ್ಚಗಳನ್ನು ಅದು ಇತರ ಮಾರ್ಗಗಳ ಮೂಲಕ ಭರಿಸಬೇಕು ಎಂದು ಸಚಿವಾಲಯ ಹೇಳಿದೆ.

ಗೂಗಲ್ ಪೇ, ಫೋನ್ ಪೇ, ಪೇಟಿಎಂ, ನೆಫ್ಟ್ ಮೊದಲಾದ ಪಾವತಿ ಸೇವೆಗಳು ಸದ್ಯ ಉಚಿತವಾಗಿದೆ. ಆದರೆ ಈ ಸೇವೆ ನೀಡುವ ಕಂಪೆನಿಗಳಿಗೆ ಉಂಟಾಗುವ ಖರ್ಚನ್ನು ಸೇವಾ ಶುಲ್ಕದ ಮೂಲಕ ಭರಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿತ್ತೆಂದು ಸುದ್ದಿಯಾಗಿತ್ತು. ಈ ಕುರಿತಂತೆ ಸ್ಟೇಕ್‌ಹೋಲ್ಡರ್‌ಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು ಎಂಬ ವರದಿಗಳು ಬಂದಿತ್ತು.

ಈ ವರದಿಗಳ ಬೆನ್ನಲ್ಲೆ ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ಈ ಸ್ಪಷ್ಟನೆಯನ್ನು ನೀಡಿದೆ.

Join Whatsapp
Exit mobile version