ದೆಹಲಿ: ಕೋವಿಡ್ ಬಗ್ಗೆ ದಯವಿಟ್ಟು ಯಾರು ಗಾಬರಿ ಆಗುವುದು ಬೇಡ. ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೊರೊನಾ ಜಾಸ್ತಿ ಆಗುತ್ತಿದೆ ಅಂತ ಅನ್ಕೋಬೇಡಿ. ನಾವು ಎಲ್ಲಾ ಮಾಹಿತಿಯನ್ನು ಮಾಧ್ಯಮಕ್ಕೂ ಸಹ ನೀಡುತ್ತೇವೆ. ಈಗಾಗಲೇ ಜನರು ಮಾಸ್ಕ್ ಹಾಕಿಕೊಳ್ಳುತ್ತೊದ್ದಾರೆ. ಆದರೆ ಯಾರು ಸದ್ಯಕ್ಕೆ ಗಾಬರಿ ಪಡುವುದು ಬೇಡ ಎಂದು ಹೇಳಿದ್ದಾರೆ.