Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಯಾರೂ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ; 50,000 ರೂ ದಂಡ ವಿಧಿಸುತ್ತೇವೆ: ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ಯಾರೂ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ; 50,000 ರೂ ದಂಡ ವಿಧಿಸುತ್ತೇವೆ: ಡಿಕೆ ಶಿವಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ ಯಾರೂ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ನಗರದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಯಾರೂ ಫ್ಲೆಕ್ಸ್ ಕಟೌಟ್ ಹಾಕುವಂತಿಲ್ಲ ” ಎಂದು ಸೂಚನೆ ನೀಡಿದರು.


ಆಗಸ್ಟ್ 15 ರ ಒಳಗಡೆ ಫ್ಲೆಕ್ಸ್ ಹಾಕುವುದನ್ನು ಬ್ಯಾನ್ ಮಾಡುತ್ತೇವೆ. ಈ ಬಗ್ಗೆ ನ್ಯಾಯಾಲಯದ ಆದೇಶವೂ ಇದೆ. ಯಾವದೇ ಪಕ್ಷದ ಫ್ಲೆಕ್ಸ್ ಬೋರ್ಡಿಂಗ್ ಇರಲಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಯಾರಾದರೂ ಫ್ಲೆಕ್ಸ್ ಹಾಕಿದರೆ 50,000 ದಂಡ ಹಾಕಲು ನ್ಯಾಯಾಲಯದ ಆದೇಶ ಈಗಾಗಲೇ ಇದೆ. ಸಿಎಂ ಆಗಲಿ ನನ್ನದೇ ಆಗಲಿ ಯಾವುದೇ ಫ್ಲೆಕ್ಸ್ ಹಾಕುವ ಹಾಗಿಲ್ಲ. ಸರ್ಕಾರ ಕಾರ್ಯಕ್ರಮದ ಬಗ್ಗೆ ಏನಾದರೂ ಫ್ಲೆಕ್ಸ್ ಹಾಕಬೇಕಾದಲ್ಲಿ ಅದಕ್ಕೆ ಅನುಮತಿ ಪಡೆದುಕೊಳ್ಳುತ್ತೇವೆ ಎಂದರು.

Join Whatsapp
Exit mobile version