Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಮೊಹರಂ ಮೆರವಣಿಗೆ ನಿಷೇಧ| ಶಿಯಾ ಧರ್ಮಗುರುಗಳ ಆಕ್ರೋಶ

ಉತ್ತರ ಪ್ರದೇಶದಲ್ಲಿ ಮೊಹರಂ ಮೆರವಣಿಗೆ ನಿಷೇಧ| ಶಿಯಾ ಧರ್ಮಗುರುಗಳ ಆಕ್ರೋಶ

ಲಖ್ನೋ: ಕೋವಿಡ್ ಹಿನ್ನೆಲೆಯಲ್ಲಿ ಮೊಹರಂ ವೇಳೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸದಂತೆ ಉತ್ತರ ಪ್ರದೇಶ ಡಿಜಿ ಮುಕುಲ್ ಗೋಯೆಲ್ ಆದೇಶಿಸಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಶಿಯಾ ಧರ್ಮಗುರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆ ನಿಷೇಧವು ಆಚರಣೆ ನಿಷೇಧಿಸಿದಂತೆ ಎಂದು ಶಿಯಾ ಧರ್ಮಗುರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 10ರಿಂದ 19ರ ಮೊಹರಂ ವೇಳೆ ಮೆರವಣಿಗೆ ಮಾಡಬಾರದೆನ್ನುವ ಆದೇಶ ಗೋಯೆಲ್ ಅವರು 19 ನಿಯಮಗಳ ಹೇರಿಕೆ ಜೊತೆ ಆದೇಶಿಸಿದ್ದಾರೆ.

ಸೋಮವಾರ ಅಖಿಲ ಭಾರತ ಶಿಯಾ ಪರ್ಸನಲ್ ಲಾ ಮಂಡಳಿಯು ಸಭೆ ಸೇರಿ ಸಮಸ್ಯೆಯನ್ನು ಚರ್ಚಿಸಿದ್ದು, ಉತ್ತರಪ್ರದೇಶ ಪೊಲೀಸರು ಸರಕಾರವು ಮೊಹರಂ ಮೆರವಣಿಗೆ ವಿರುದ್ಧ ಆದೇಶಿಸಿದ ಅತಿ ನಿಯಮಗಳನ್ನು ತೆಗೆಯುವಂತೆ ಅವರು ಕೇಳಿಕೊಂಡರು. ಶಾಂತಿಪ್ರಿಯ ಶಿಯಾಗಳ ಮೇಲಿನ ಈ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ. ಆದೇಶಕ್ಕೆ ಬಳಸಿದ ಭಾಷೆಯೂ ಸರಿಯಿಲ್ಲ ಎಂದು ಶಿಯಾ ನಾಯಕ ಮೌಲಾನಾ ಕಲ್ಬೆ ನೂರಿ ಹೇಳಿದ್ದಾರೆ. ನಾವು ಪೊಲೀಸ್ ಮತ್ತು ಸರಕಾರದ ಪ್ರತಿನಿಧಿಗಳ ಜೊತೆಗಿನ ಈ ಕುರಿತ ಮಾತುಕತೆಯನ್ನು ಬಹಿಷ್ಕರಿಸುವುದಾಗಿ ಅವರು  ವೇಳೆ ಹೇಳಿದರು.

ಮೊಹರಂ ಒಂದು ದುಃಖಾಚರಣೆಯೇ ಹೊರತು ಹಬ್ಬವಲ್ಲ ಎಂಬುದನ್ನು ಡಿಜಿ ತಿಳಿದಿರಬೇಕಿತ್ತು. ಮುಸ್ಲಿಮರ ವಿರುದ್ಧದ ಸರಕಾರದ ಅಸಡ್ಡೆಯನ್ನಷ್ಟೆ ಇದು ತೋರಿಸುತ್ತದೆ ಎಂದು ಶಿಯಾ ಮಾರ್ಗಳಿ ಚಾಂದ್ ಸಮಿತಿಯ ಮೌಲಾನಾ ಯಾಸೂಬ್ ಅಬ್ಬಾಸ್ ಹೇಳಿದ್ದಾರೆ.

ಮೊಹರಂ ವೇಳೆ ಅಂತರ್ಜಾಲ ಪ್ರಕಟಣೆ ಸಹಿತ ಎಲ್ಲ ಪ್ರಕಟಣೆಗಳನ್ನು ನಿಷೇಧಿಸಲಾಗಿದೆ. ಹೀಗಿರುವಾಗ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡು ಏನು ಪ್ರಯೋಜನ? ಶಿಯಾಗಳು ಉಲಾಮಾ ಸಂಘಟನೆಗೂ ಮಾತುಕತೆ ಬಹಿಷ್ಕರಿಸುವಂತೆ ಕೇಳಿಕೊಂಡಿದ್ದಾರೆ.

Join Whatsapp
Exit mobile version