Home ಟಾಪ್ ಸುದ್ದಿಗಳು ಇನ್ಮುಂದೆ ತೆಲಂಗಾಣದಲ್ಲಿ ‘ಸಿಬಿಐ’ ತನಿಖೆಗೆ ಅನುಮತಿಯಿಲ್ಲ

ಇನ್ಮುಂದೆ ತೆಲಂಗಾಣದಲ್ಲಿ ‘ಸಿಬಿಐ’ ತನಿಖೆಗೆ ಅನುಮತಿಯಿಲ್ಲ

ಹೈದರಾಬಾದ್: ತೆಲಂಗಾಣ ಸರ್ಕಾರವು ಇನ್ನು ಮುಂದೆ ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳಕ್ಕೆ ತನಿಖೆ ನಡೆಸಲು ಇರುವ ಅನುಮತಿಯನ್ನು ರದ್ದು ಮಾಡಿದ್ದು, ಆ ಮೂಲಕ ಸಿಬಿಐ ತನಿಖೆಗೆ ನಿರ್ಬಂಧ ಹೇರಿದೆ.

ಐದು ದಿನಗಳ ಹಿಂದೆ ಟಿಆರ್ ಎಸ್ ಶಾಸಕರ ಖರೀದಿಗೆ ಬಿಜೆಪಿ ಏಜೆಂಟರು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತೆಲಂಗಾಣ ಪೋಲೀಸರು ಅವರನ್ನು ಬಂಧಿಸಿದ್ದರು ಮತ್ತು ಹಣವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ಮುಖಂಡ ಗುಜ್ಜುಲ ಪ್ರೇಮೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ತೆಲಂಗಾಣದ ಹೆಚ್ಚುವರಿ ಅಡ್ವೊಕೇಟ್ ಜನರಲ್(ಎಎಜಿ) ಈ ಮಾಹಿತಿ ನೀಡಿದ್ದಾರೆ.

ವಿಪಕ್ಷಗಳು ಆಡಳಿತದಲ್ಲಿ ಇರುವ ಕೆಲವು ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಅನುಮತಿ ಇಲ್ಲ. ಇದೀಗ ರಾಜ್ಯದಲ್ಲೂ ಸಿಬಿಐ ತನಿಖೆಯ ಒಪ್ಪಿಗೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರದ್ದುಗೊಳಿಸಿದ್ದಾರೆ. ಆಗಸ್ಟ್ ನಲ್ಲಿಯೇ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಚಂದ್ರಶೇಖರ ರಾವ್ ,ಹೊಸದಿಲ್ಲಿ ಯಿಂದಲೇ ಪಕ್ಷದ ನಾಲ್ವರು ಶಾಸಕರ ಖರೀದಿಗೆ ಡೀಲ್ ನಡೆ ಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ 100 ಕೋಟಿ ರೂ. ಆಮಿಷವನ್ನು ನಮ್ಮ ಪಕ್ಷದ ಶಾಸಕರು ತಿರಸ್ಕರಿಸಿದ್ದಾರೆ. ಪ್ರಧಾನಿಯವರೇ ಇಂಥ ಕ್ರೂರತೆಯನ್ನೇಕೆ ಪ್ರದರ್ಶಿಸುತ್ತಿದ್ದೀರಿ ಎಂದು ರಾವ್ ಪ್ರಶ್ನಿಸಿದ್ದಾರೆ.

Join Whatsapp
Exit mobile version