Home ಟಾಪ್ ಸುದ್ದಿಗಳು ಯಾವುದೇ ನಾಯಕರೂ ಬಿಜೆಪಿ ತೊರೆಯುತ್ತಿಲ್ಲ: ಸಿ.ಟಿ ರವಿ ಸ್ಪಷ್ಟನೆ

ಯಾವುದೇ ನಾಯಕರೂ ಬಿಜೆಪಿ ತೊರೆಯುತ್ತಿಲ್ಲ: ಸಿ.ಟಿ ರವಿ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಸೇರುವ ಸಲುವಾಗಿ ಯಾವುದೇ ನಾಯಕರೂ ಬಿಜೆಪಿ ತೊರೆಯುತ್ತಿಲ್ಲ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.


ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಸಿಟಿ ರವಿಯವರು ಪ್ರತಿಕ್ರಿಯೆ ನೀಡಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಅವರು, ಪಕ್ಷದ ಎಲ್ಲಾ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಪಕ್ಷಾಂತರಗೊಳ್ಳುವ ಕುರಿತು ಯಾವುದೇ ನಾಯಕರೂ ಚಿಂತನೆ ನಡೆಸುತ್ತಿಲ್ಲ. ನಾನು ಸಮಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವ ವ್ಯಕ್ತಿ. ನಾನು ಯಾವುದೇ ನಿರ್ಧಾರವನ್ನೂ ತರಾತುರಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಹೊತ್ತಿನಲ್ಲಿ ನನಗೆ ನಮ್ಮ ಎಲ್ಲ ನಾಯಕರ ಮೇಲೆ ನಂಬಿಕೆ ಇದೆ. ಯಾವುದೇ ಪುರಾವೆಗಳಿಲ್ಲದೆ ಯಾರನ್ನಾದರೂ ಅನುಮಾನಿಸುವುದು ತಪ್ಪು ಎಂದು ಹೇಳಿದರು.

Join Whatsapp
Exit mobile version