Home ಗಲ್ಫ್ ಬೂಸ್ಟರ್ ಡೋಸ್ ಪಡೆಯದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ: ಸೌದಿ

ಬೂಸ್ಟರ್ ಡೋಸ್ ಪಡೆಯದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ: ಸೌದಿ

ಜಿದ್ದಾ: ಜಾಗತಿಕವಾಗಿ ಕೋವಿಡ್ ಮತ್ತು ಓಮಿಕ್ರಾನ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 1, 2022 ರಿಂದ ಬೂಸ್ಟರ್ ಡೋಸ್ ಪಡೆಯದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ಘೋಷಿಸಿದೆ.

ತವಕ್ಕಲ್ ಆ್ಯಪ್ ಮೂಲಕ ಬೂಸ್ಟರ್ ಗಾಗಿ ನೋಂದಣಿ ಮಾಡಬಹುದು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾತ್ರವಲ್ಲ 18 ವರ್ಷ ಮೇಲ್ಪಟ್ಟವರು ಕೋವಿಡ್ ಎರಡನೇ ಡೋಸ್ ಪಡೆದ 8 ತಿಂಗಳ ಬಳಿಕ ಬೂಸ್ಟರ್ ಡೋಸ್ ಅನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಬೂಸ್ಟರ್ ಡೋಸ್ ಪಡೆಯದೆ ಈ ಕೆಳಗಿನ ಚಟುವಟಿಕೆಗಳ ಮೇಲೆ ಸೌದಿ ಸರ್ಕಾರ ನಿಷೇಧ ಹೇರಿದೆ

1) ಯಾವುದೇ ಆರ್ಥಿಕ, ವಾಣಿಜ್ಯ, ಸಾಂಸ್ಕೃತಿಕ, ಕ್ರೀಡೆ ಅಥವಾ ಪ್ರವಾಸೋದ್ಯಮ ಚಟುವಟಿಕೆಯನ್ನು ಪ್ರವೇಶಿಸುವುದನ್ನು ತಡೆ ಹಿಡಿದಿದೆ.
2) ಯಾವುದೇ ಸಾಂಸ್ಕೃತಿಕ, ವೈಜ್ಞಾನಿಕ, ಸಾಮಾಜಿಕ, ಅಥವಾ ಮನರಂಜನಾ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶಿಸುವುದರ ಮೇಲೆ ನಿಷೇಧ ಹೇರಿದೆ
3) ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಯನ್ನು ಪ್ರವೇಶಿಸುವುದು ನಿಷೇಧಿಸಲಾಗಿದೆ

Join Whatsapp
Exit mobile version