Home ಟಾಪ್ ಸುದ್ದಿಗಳು ಎರಡು ವರ್ಷದ ಬಳಿಕ ತೆರೆದ ದೆಹಲಿಯ ನಿಝಾಮುದ್ದೀನ್ ಮರ್ಕಝ್

ಎರಡು ವರ್ಷದ ಬಳಿಕ ತೆರೆದ ದೆಹಲಿಯ ನಿಝಾಮುದ್ದೀನ್ ಮರ್ಕಝ್

ನವದೆಹಲಿ: ತಬ್ಲಿಘಿ ಜಮಾತ್ ಕಾರ್ಯಕ್ರಮವು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇರೆಗೆ ಕಳೆದ 2 ವರ್ಷಗಳಿಂದ ಬಂದ್ ಆಗಿದ್ದ ದೆಹಲಿಯ ನಿಝಾಮುದ್ದೀನ್‌ ಮರ್ಕಝ್ ಮಸೀದಿ ಗುರುವಾರ ಪುನರಾರಂಭವಾಗಿದೆ.

ಶಬ್-ಇ-ಬರಾತ್‌ ಹಿನ್ನೆಲೆಯಲ್ಲಿ ಭಕ್ತರ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ದೆಹಲಿ ಹೈಕೋರ್ಟ್ ಮಸೀದಿ ಪುನರಾರಂಭಕ್ಕೆ ಬುಧವಾರ ಹಸಿರು ನಿಶಾನೆ ತೋರಿತ್ತು. ಹೀಗಾಗಿ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಮಸೀದಿಯನ್ನು ತೆರೆಯಲಾಗಿದೆ. 

2020ರ ಮಾರ್ಚ್‌ನಲ್ಲಿ ಕೊರೊನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ತಬ್ಲೀಗ್ ಜಮಾತ್‌ ಸಮಾವೇಶ ನಡೆದಿತ್ತು. ಇದನ್ನೇ ನೆಪಮಾಡಿಕೊಂಡ ಸಂಘಪರಿವಾರದವರು, ಕೊರೋನಾ ಹರಡಲು ತಬ್ಲೀಗ್ ಜಮಾಅತ್ ಕಾರಣ ಎಂದು ಸುಳ್ಳು ಸುದ್ದಿ ಹಬ್ಬಿಸಿತ್ತು.

Join Whatsapp
Exit mobile version