ನೀರವ್‌ ಮೋದಿ, ಮಲ್ಯ, ಚೋಕ್ಸಿಯಿಂದ ಮುಟ್ಟುಗೋಲು ಹಾಕಿದ್ದ 19,000 ಕೋಟಿಯಲ್ಲಿ 9,000 ಕೋಟಿ ಬ್ಯಾಂಕ್‌ ಗಳಿಗೆ ವರ್ಗಾಯಿಸಿದ ಈಡಿ

Prasthutha|

ನವದೆಹಲಿ : ವಿವಿಧ ಬ್ಯಾಂಕ್‌ ಹಗರಣಗಳಲ್ಲಿ ಭಾಗಿಯಾಗಿ ವಿದೇಶಗಳಿಗೆ ಪರಾರಿಯಾಗಿರುವ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮುಂತಾದವರಿಂದ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದ್ದ ಸುಮಾರು 18,170 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ,  9371.17 ಕೋಟಿ ರೂ.ಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ ಗಳು ಮತ್ತು ಕೇಂದ್ರ ಸರಕಾರಕ್ಕೆ ವರ್ಗಾಯಿಸಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ಅರ್ಧದಷ್ಟು ಮೊತ್ತವನ್ನು ಬ್ಯಾಂಕ್‌ ಗಳು ಮತ್ತು ಸರಕಾರಕ್ಕೆ ವರ್ಗಾಯಿಸಲಾಗಿದೆ. ವಿಜಯ್‌ ಮಲ್ಯ, ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿಯವರಿಂದ ಒಟ್ಟು 22,585.83 ಕೋಟಿ ರೂ. ವಂಚನೆಯಾಗಿದೆ. ಅದರಲ್ಲಿ 18,170 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಿವಿಧ ಬ್ಯಾಂಕ್‌ ವಂಚನೆ ಪ್ರಕರಣಗಳಲ್ಲಿ ಈ ಮೂವರು ಉದ್ಯಮಿಗಳು ಭಾರತ ಬಿಟ್ಟು ಪರಾರಿಯಾಗಿದ್ದಾರೆ. ಇವರುಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳು ಜಾರಿಯಲ್ಲಿದೆ. ಆದರೆ, ಇನ್ನೂ ಯಾರೊಬ್ಬರನ್ನೂ ಭಾರತಕ್ಕೆ ಕರೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಫಲವಾಗಿದೆ.  

Join Whatsapp