ಮುರುಗೇಶ್ ನಿರಾಣಿ ರಾಜ್ಯದ ‘ಮುಖ್ಯಮಂತ್ರಿ’ ಆಗಲಿದ್ದಾರೆ : ಈಶ್ವರಪ್ಪ ಭವಿಷ್ಯ !

Prasthutha|

► ಕೊನೆಗೊಳ್ಳಲಿದೆಯೇ ಬೊಮ್ಮಾಯಿ ಯುಗ ?

- Advertisement -

ಬಾಗಲಕೋಟೆ: ಮುರುಗೇಶ್ ಆರ್ ನಿರಾಣಿ ರಾಜ್ಯದ ‘ಮುಖ್ಯಮಂತ್ರಿ’ ಆಗಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇವತ್ತಲ್ಲ ನಾಳೆ ಅವರು ಸಿಎಂ ಆಗಿಯೇ ಆಗುತ್ತಾರೆ. ಇಡೀ ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವಂಥ ಸಿಎಂ ಆಗಬೇಕು ಎಂದು ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಈಶ್ವರಪ್ಪ ಸಿಎಂ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದ್ದು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಯುಗ ಕೊನೆಗೊಳ್ಳಲಿದೆಯೇ ಎನ್ನುವ ಲೆಕ್ಕಾಚಾರಗಳು ಕೂಡ ಮುನ್ನಲೆಗೆ ಬಂದಿದೆ.

- Advertisement -

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ವಿಜಯಪುರ ಹಾಗೂ ಬಾಗಲಕೋಟೆ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ ಮುರುಗೇಶ್ ಆರ್ ನಿರಾಣಿ ರಾಜ್ಯದ ‘ಮುಖ್ಯಮಂತ್ರಿ’ ಆಗಲಿದ್ದಾರೆ ಎಂದ ಮಾತ್ರಕ್ಕೆ ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ತೆಗೆದುಬಿಡುತ್ತಾರೆ ಎಂದು ಯಾರೊಬ್ಬರೂ ಅನ್ಯಥಾ ‌ಭಾವಿಸಬಾರದು. ಅವರು ನಾಳೆಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ. ಒಂದು ದಿನ ಅವರೂ ಮುಖ್ಯಮಂತ್ರಿ ಆಗುತ್ತಾರೆ ಎಂದು ‌ಸೂಚ್ಯವಾಗಿ ನುಡಿದರು.

ಮುಖ್ಯಮಂತ್ರಿ ಆದರೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡ್ತಿಯೇನಪ್ಪಾ ಎಂದು ಸಚಿವ ನಿರಾಣಿರನ್ನು ವೇದಿಕೆ ಮೇಲೇಯೇ ಈಶ್ವರಪ್ಪ ಕೇಳಿದ್ದಾರೆ. ವಿಜಯದ ಸಂಕೇತ ತೋರಿಸುತ್ತಾ ನಗುತ್ತಲೇ ಮುರುಗೇಶ್‌ ನಿರಾಣಿ ಓಕೆ ಎಂದಿದ್ದಾರೆ.

Join Whatsapp