Home ಟಾಪ್ ಸುದ್ದಿಗಳು ಭಾರತದ ‘ಗಾನಕೋಗಿಲೆ’ ಲತಾ ಮಂಗೇಶ್ಕರ್ ಇನ್ನಿಲ್ಲ

ಭಾರತದ ‘ಗಾನಕೋಗಿಲೆ’ ಲತಾ ಮಂಗೇಶ್ಕರ್ ಇನ್ನಿಲ್ಲ

ಮುಂಬೈ: ಗಾನಕೋಗಿಲೆ ಲತಾ ಮಂಗೇಶ್ಕರ್ ಇಂದು(ಭಾನುವಾರ) ಬೆಳಗ್ಗೆ ನಿಧನರಾಗಿದ್ದಾರೆ.

ಕೋವಿಡ್ ಸೋಂಕು ತಗುಲಿ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದಲೂ ಅವರು ಬಳಲುತ್ತಿದ್ದರು.

92 ವರ್ಷದ ಲತಾ ಮಂಗೇಶ್ಕರ್ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ ಕಂಡುಬಂದು ಕಳೆದ ಜನವರಿ 8ರಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು. ಕೆಲ ದಿನಗಳ ನಂತರ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದರಿಂದ ವೆಂಟಿಲೇಟರ್ ನೆರವನ್ನು ತೆಗೆಯಲಾಗಿತ್ತು. ಆದರೆ ನಿನ್ನೆ ಮತ್ತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.

ಲತಾ ಮಂಗೇಶ್ಕರ್ ಅವರು ಹಿನ್ನೆಲೆ ಗಾಯನದ ಏಳು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ‘ಆಯ್ ಮೇರೆ ವತನ್ ಕೆ ಲೋಗೋ’, ‘ಲಗ್ ಜಾ ಗಲೇ’, ‘ಯೇ ಕಹಾನ್ ಆಗೇ ಹೈ ಹಮ್’ ಮತ್ತು ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’ ಮುಂತಾದ ಎಂದೂ ಮರೆಯದ ಹಾಡುಗಳನ್ನು ನೀಡಿದವರು. ಅವರ ಅಸಾಧಾರಣ ಪ್ರತಿಭೆಗಾಗಿ ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿಗಳು ಅರಸಿದೆ.

ಪಂಡಿತ್‌ ದೀನಾನಾಥ್‌ ಮಂಗೇಶ್ಕರ್‌ ಅವರ ಹಿರಿಯ ಮಗಳಾಗಿ 1929ರ ಅಕ್ಟೋಬರ್‌ 28ರಂದು ಲತಾ ಜನಿಸಿದರು. ಅವರ ತಂದೆ ಮರಾಠಿ ಮೂಲದ ಗಾಯಕರು. ಸೋದರಿ ಆಶಾ ಭೋಸ್ಲೆ ಸೇರಿದಂತೆ ಅವರಿಗೆ ನಾಲ್ವರು ಒಡಹುಟ್ಟಿದವರಿದ್ದಾರೆ.

Join Whatsapp
Exit mobile version