Home ಟಾಪ್ ಸುದ್ದಿಗಳು ಮತ್ತೆ ವಿಟ್ಲದಲ್ಲಿ ಫೀಲ್ಡ್ ಗಿಳಿದ ನೈಟ್ ರಾಬರಿ ಗ್ಯಾಂಗ್: ದೂರು ದಾಖಲು

ಮತ್ತೆ ವಿಟ್ಲದಲ್ಲಿ ಫೀಲ್ಡ್ ಗಿಳಿದ ನೈಟ್ ರಾಬರಿ ಗ್ಯಾಂಗ್: ದೂರು ದಾಖಲು

ವಿಟ್ಲ: ತಡರಾತ್ರಿ ಮಾರಕಾಯುಧಗಳನ್ನು ತೋರಿಸಿ ದರೋಡೆಗೈಯ್ಯುವ ಸ್ಥಳೀಯ ಕ್ರಿಮಿನಲ್ ಗುಂಪು ಮತ್ತೆ ಕಣಕ್ಕಿಳಿದಿದ್ದು ಕೇಪು ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ.

ಸೋಮವಾರ  ತಡರಾತ್ರಿ ಕುದ್ದುಪದವಿನಲ್ಲಿ ಲಾರಿಯೊಂದನ್ನು ತಡೆದು, ಚಾಲಕನಿಗೆ ಹಲ್ಲೆ ನಡೆಸಿ ಲಾರಿಯಲ್ಲಿದ್ದ ಹಣವನ್ನು ಲೂಟಿ ಮಾಡಿದ್ದು ಸಾರ್ವಜನಿಕರು ಜಮಾಯಿಸಿದಾಗ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತ ಘಟನೆ ಬೆಳಕಿಗೆ ಬಂದಿದೆ.

ಹಲ್ಲೆಗೊಳಪಟ್ಟವರು ದೂರು ಕೊಡುವ ಮುನ್ನವೇ ದರೋಡೆಕೋರರ ಗುಂಪು ಬಚಾವಾಗಲು ತಮ್ಮ ವಿರುದ್ಧವೇ ಕೊಲೆಯತ್ನ ನಡೆದಿದೆ ಎಂದು ದೂರು ಸಲ್ಲಿಸಿ, ಆಸ್ಪತ್ರೆಯಲ್ಲಿ ದಾಖಲಾಗಿ ಚಾಣಾಕ್ಷ್ಯತನ ಮೆರೆದಿದ್ದು ಘಟನೆಗೆ ಹೊಸ ತಿರುವು ಉಂಟಾಗಿದೆ.

ಇಂತಹ ಪ್ರಕರಣಗಳ ಬಗ್ಗೆ ಈ ಹಿಂದೆಯೇ ಸಾರ್ವಜನಿಕರು ವಿಟ್ಲ ಪೋಲೀಸರೊಂದಿಗೆ  ಹೇಳಿಕೊಂಡಿದ್ದು ಮೌಖಿಕ ಅಥವಾ ಲಿಖಿತ ದೂರುಗಳು ನೀಡದ ಕಾರಣ ಕ್ರಮ ಕೈಗೊಂಡಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ಈಗ ದೂರು ದಾಖಲಾದ ಹಿನ್ನೆಲೆಯಲ್ಲಿ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version