Home ಟಾಪ್ ಸುದ್ದಿಗಳು ಶ್ರೀನಿವಾಸ್ ಜೈನ್ ರಾಜೀನಾಮೆ ಬೆನ್ನಲ್ಲೇ ಎನ್’ಡಿಟಿವಿ ತೊರೆದ ನಿಧಿ ರಝ್ದಾನ್

ಶ್ರೀನಿವಾಸ್ ಜೈನ್ ರಾಜೀನಾಮೆ ಬೆನ್ನಲ್ಲೇ ಎನ್’ಡಿಟಿವಿ ತೊರೆದ ನಿಧಿ ರಝ್ದಾನ್

ನವದೆಹಲಿ: ಎನ್’ಡಿಟಿವಿಯೊಂದಿಗಿನ ತಮ್ಮ ಮೂರು ದಶಕಗಳ ಪ್ರಯಾಣವು ಕೊನೆಗೊಂಡಿದೆ ಎಂದು ಗ್ರೂಪ್ ಎಡಿಟರ್ ಆಗಿದ್ದ ಶ್ರೀನಿವಾಸನ್ ಜೈನ್ ರಾಜೀನಾಮೆ ಘೋಷಿಸಿದ ಮೂರು ದಿನಗಳ ನಂತರ ನಿಧಿ ರಝ್ದಾನ್ ಅವರು ಎನ್’ಡಿಟಿವಿಯ ಕಾರ್ಯನಿರ್ವಾಹಕ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಅದಾನಿ ಸಂಸ್ಥೆ ಎನ್’ಡಿಟಿವಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ನಡೆದ ಸರಣಿ ರಾಜೀನಾಮೆಗಳಲ್ಲಿ ರಝ್ದಾನ್ ಅವರ ನಿರ್ಧಾರವು ಇತ್ತೀಚಿನದ್ದಾಗಿದೆ. ಶನಿವಾರವಷ್ಟೇ ಶ್ರೀನಿವಾಸನ್ ಜೈನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Join Whatsapp
Exit mobile version