ವಿಂಬಲ್ಡನ್‌: ಪ್ರೇಕ್ಷಕನಿಗೆ ಉಗಿದ ಆಟಗಾರನಿಗೆ ಭಾರಿ ದಂಡ !

Prasthutha: July 2, 2022

ವಿಂಬಲ್ಡನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದ ವೇಳೆ ಪ್ರೇಕ್ಷಕರ ಕಡೆ ಮುಖಮಾಡಿ ಉಗಿದಿದ್ದ ಆಟಗಾರನಿಗೆ ಭಾರಿ ದಂಡ ವಿಧಿಸಲಾಗಿದೆ.

ಬ್ರಿಟನ್‌ನ ಪಾಲ್ ಜುಬ್ ವಿರುದ್ಧದ ಪಂದ್ಯದ ವೇಳೆ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಪ್ರೇಕ್ಷಕರ ದಿಕ್ಕಿನಲ್ಲಿ ಉಗುಳಿದ್ದರು. ಈ ಕುರಿತು ವಿಚಾರಣೆ ನಡೆಸಿದ ಅಧಿಕಾರಿಗಳು, ಕಿರ್ಗಿಯೋಸ್ ನಡೆ ಕ್ರೀಡಾಸ್ಫೂರ್ತಿಗೆ ವಿರುದ್ಧವೆಂದು ತೀರ್ಮಾನಿಸಿ ₹7.89 ಲಕ್ಷ ದಂಡ ವಿಧಿಸಿದ್ದಾರೆ. ಇದು ವಿಂಬಲ್ಡನ್ ಇತಿಹಾಸದಲ್ಲೇ ವಿಧಿಸಲಾದ ಗರಿಷ್ಠ ದಂಡವಾಗಿದೆ.

ಘಟನೆ ನಡೆದ ಬಳಿಕ ತನ್ನ ವರ್ತನೆ ಸಮರ್ಥಿಸಿಕೊಂಡಿದ್ದ ಆಸ್ಟ್ರೇಲಿಯದ ಆಟಗಾರ, ನನ್ನ ವಿರುದ್ಧ ದ್ವೇಷ ಕಾರುವ ಮತ್ತು ನನ್ನನ್ನು ಅವಮಾನಿಸುವ ಕೆಲ ಅಭಿಮಾನಿಗಳ ವರ್ತನೆಯನ್ನು ದೀರ್ಘಕಾಲದಿಂದ ಸಹಿಸಿಕೊಂಡು ಬಂದಿದ್ದೇನೆ. ಹೀಗಾಗಿ ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಆ ನಿರ್ದಿಷ್ಟ ವ್ಯಕ್ತಿ ಟೆನಿಸ್‌ ಮೇಲಿನ ಅಭಿಮಾನದಿಂದ ಪಂದ್ಯ ವೀಕ್ಷಿಸಲು ಬಂದಿರಲಿಲ್ಲ. ಆತ ಯಾರನ್ನೂ ಬೆಂಬಲಿಸುತ್ತಿರಲಿಲ್ಲ. ಆದರೆ ನನ್ನನ್ನು ಅವಮಾನಿಸುತ್ತಲೇ ಇದ್ದ ಎಂದು ಹೇಳಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ