ಎಲ್ಲಾ ರಾಜ್ಯಗಳಲ್ಲೂ ಎನ್ಐಎ ಕಚೇರಿ: ಅಮಿತ್ ಶಾ

Prasthutha|

ನವದೆಹಲಿ: 2024ರೊಳಗೆ ಎಲ್ಲಾ ರಾಜ್ಯಗಳಲ್ಲೂ ಎನ್ ಐಎ ಕಚೇರಿಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

- Advertisement -

ಹರ್ಯಾಣದ ಬೋಂದ್ಸಿ ಎಂಬಲ್ಲಿ ಪೊಲೀಸ್ ಹೌಸಿಂಗ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಬೆಳವಣಿಗೆಗೆ ಅಡೆತಡೆಗಳನ್ನು ಒಡ್ಡುತ್ತಿದ್ದ ಎನ್ ಜಿಒಗಳ ವಿರುದ್ಧ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಎನ್ ಜಿಒಗಳ ದುರ್ಬಳಕೆ ತಡೆಯಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

Join Whatsapp
Exit mobile version