Home ಟಾಪ್ ಸುದ್ದಿಗಳು ಪ್ರವೀಣ್ ನೆಟ್ಟಾರು ಹತ್ಯೆ| ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ NIA

ಪ್ರವೀಣ್ ನೆಟ್ಟಾರು ಹತ್ಯೆ| ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ NIA

ಸುಳ್ಯ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ ಐ ಎ ) ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿಲು ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ.

ಈ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರನ್ನು ಪತ್ತೆಹಚ್ಚಲು ಮಾಹಿತಿ ನೀಡಿದರೆ ನಿಗದಿತ ನಗದು ಉಡುಗೊರೆಯನ್ನು ನೀಡಲಾಗುವುದು ಎಂದು ಎನ್ ಐ ಎ ತಿಳಿಸಿದೆ.

ಎನ್ ಐ ಎ ಯು ಆರೋಪಿಗಳ ಹೆಸರು, ಫೋಟೋಗಳನ್ನು ಹಾಗೂ ಅವರನ್ನು ಪತ್ತೆ ಹಚ್ಚಿದವರಿಗೆ ನಗದು ಮೊತ್ತದ ಹಣವನ್ನು ಘೋಷಿಸಿದೆ.

ತಲೆಮರೆಸಿಕೊಂಡಿರುವ ಆರೋಪಿಗಳಾದ ಮಹಮ್ಮದ್ ಮುಸ್ತಫಾ ಪೈಚಾರ್ (ಬೆಳ್ಳಾರೆ), ತುಫೈಲ್ ಮಡಿಕೇರಿ ಇವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ ಐದು ಲಕ್ಷ ನಗದನ್ನು ನೀಡಲಾಗುವುದು ಎಂದು ಎನ್ ಐ ಎ ಹೇಳಿದೆ.

ಉಮರ್ ಫಾರೂಕ್ ಸುಳ್ಯ, ಅಬೂಬಕ್ಕರ್ ಸಿದ್ದೀಕ್ ಬೆಳ್ಳಾರೆ ಇವರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದವರಿಗೆ ತಲಾ ಎರಡು ಲಕ್ಷ ನಗದನ್ನು ನೀಡಲಾಗುವುದು ಎಂದೂ ತಿಳಿಸಿದೆ.

Join Whatsapp
Exit mobile version