Home ಟಾಪ್ ಸುದ್ದಿಗಳು ಉ.ಪ್ರ. ನ್ಯಾಯದ ಹೆಸರಿನ ಕೊಲೆಗಳ ಸರಿಯಾದ ತನಿಖೆ ನಡೆಸುವಲ್ಲಿ NHRC ವಿಫಲ: ಎನ್ ಕೌಂಟರ್...

ಉ.ಪ್ರ. ನ್ಯಾಯದ ಹೆಸರಿನ ಕೊಲೆಗಳ ಸರಿಯಾದ ತನಿಖೆ ನಡೆಸುವಲ್ಲಿ NHRC ವಿಫಲ: ಎನ್ ಕೌಂಟರ್ ಕೊಲೆಗಳ ಪ್ರಯೋಗಶಾಲೆಯಾದ ಉತ್ತರ ಪ್ರದೇಶ

ಲಕ್ನೋ : 2017ರ ಮಾರ್ಚ್ ನಿಂದ 2018ರ ಮಾರ್ಚ್ ವರೆಗೆ ಉತ್ತರ ಪ್ರದೇಶದಲ್ಲಿ 17 ಘಟನೆಗಳಲ್ಲಿ ನಡೆದ 18 ಕೊಲೆಗಳ ಕುರಿತು ನಾಗರಿಕ ಸಾಮಾಜಿಕ ಸಂಘಟನೆಯೊಂದು ತನಿಖೆ ನಡೆಸುತ್ತಿದ್ದು, 2017 ಮಾರ್ಚ್ ಬಳಿಕ ಈ ರಾಜ್ಯವು ಎನ್ ಕೌಂಟರ್ ಕೊಲೆಗಳ ಪ್ರಯೋಗಶಾಲೆಯಾಗಿದೆ ಎಂದು ವರದಿ ನೀಡಿದೆ.
ಈ ನ್ಯಾಯದ ಹೆಸರಿನ ಕೊಲೆಗಳ ಕಾರ್ಯ ವಿಧಾನದ ಬಗ್ಗೆ ಮತ್ತು ವಸ್ತುನಿಷ್ಠತೆ ಬಗ್ಗೆ ಮ್ಯಾಜಿಸ್ಟ್ರೇಟ್ ವ್ಯವಸ್ಥೆಯಾಗಲಿ, ತನಿಖಾ ಏಜೆನ್ಸಿಗಳಾಗಲಿ ಸರಿಯಾದ ನಿಲುವು ಹೊಂದಲು ವಿಫಲವಾಗಿವೆ. 2014ರ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವರ್ಸಸ್ ಮಹಾರಾಷ್ಟ್ರ ಸರಕಾರದ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟು ನೀಡಿದ ಮಾರ್ಗಸೂಚಿಗಳನ್ನೆಲ್ಲ ಈ ಎನ್ ಕೌಂಟರ್ ಗಳು ಮೀರಿವೆ.


ಸಿಟಿಜನ್ಸ್ ಎಗೈನ್ಸ್ಟ್ ಹೇಟ್ ಮತ್ತು ವಾಚ್ ಮತ್ತು ಯೂತ್ ಫಾರ್ ಹ್ಯೂಮನ್ ರೈಟ್ಸ್ ಡಾಕ್ಯುಮೆಂಟೇಶನ್ ಪರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮದನ್ ಬಿ. ಲೋಕೂರ್ ಅವರು “ಹೆಚ್ಚಿನ ಪ್ರಕರಣಗಳಲ್ಲಿ ಎಫ್ ಐ ಆರ್ ಸಲ್ಲಿಕೆಯಾಗಿಲ್ಲ. ಇವುಗಳಲ್ಲಿ ತನಿಖೆಗಳು ಎಂದರೆ ಪ್ರಕರಣವನ್ನು ಮುಗಿಸುವಷ್ಟರ ಮಟ್ಟಿಗೆ ಮಾತ್ರ ನಡೆಸಲಾಗಿವೆ. ಎನ್ ಎಚ್ ಆರ್ ಸಿ 17 ಪ್ರಕರಣಗಳನ್ನು ಅಧ್ಯಯನ ಮಾಡಿದ್ದು, ಬಹುತೇಕ ಮೂರು ವರ್ಷಗಳಿಂದ ಮೂಲೆಗೆ ಬಿದ್ದಿರುವವುಗಳ ಬಗ್ಗೆ ವರದಿ ಅಂತಿಮಗೊಳಿಸುವುದಷ್ಟೆ ಅಲ್ಲಿ ಗೋಚರಿಸಿತು. ಇದರ ನಡುವೆ ನ್ಯಾಯದ ಹೆಸರಿನ ಕೊಲೆಗಳು ಮುಂದುವರಿದವು ಮತ್ತು ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ನೀಡಲಾಯಿತು.


ಎನ್ ಎಚ್ ಆರ್ ಸಿ ಭಾರತದ ಮಾನವ ಹಕ್ಕುಗಳ ಉನ್ನತ ಸಂಸ್ಥೆಯಾಗಿದ್ದು, ಸಾರ್ವಜನಿಕ ಸೇವೆಯಲ್ಲಿರುವವರ ಮೇಲಾಗುವ ಮಾನವ ಹಕ್ಕುಗಳ ದಮನದತ್ತ ಅದರ ಬದ್ಧತೆ. ಮುಖ್ಯವಾಗಿ ಪೊಲೀಸ್ ಸಿಬ್ಬಂದಿ ವಿರುದ್ಧ ಇದಕ್ಕೆ ಬರುವು ದೂರುಗಳು ಅಧಿಕ.
ಅಕ್ಟೋಬರ್ 29ರ ನಲ್ಸಾರ್ ಕಾನೂನು ವಿಶ್ವ ವಿದ್ಯಾನಿಲಯದ ಲಿವ್ ಲಾ ವಿಷಯವಾಗಿ ಜಸ್ಟಿಸ್ ಲೋಕೂರು ಹೇಳಿದ್ದು ಹೀಗೆ. “ನೀವು ವರದಿಯಲ್ಲಿ ಹೇಳಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಏನನ್ನೂ ಮಾಡಿಲ್ಲ; ಏನೇನೂ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಅವರು ಅಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಇನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಗಳು, ಅವುಗಳ ಕುರಿತು ಯಾರೂ ಮಾತನಾಡುವುದಿಲ್ಲ. ಕೆಲಸಕ್ಕೆ ಬಾರದ ಇಂಥ ಸಂಸ್ಥೆಗಳನ್ನು ಇಟ್ಟುಕೊಂಡು ಏನು ಪ್ರಯೋಜನ? ಏನೂ ಮಾಡುವವರಿಲ್ಲ ಎಂದ ಮೇಲೆ ಆ ಸಂಸ್ಥೆಗಳನ್ನು ರದ್ದು ಪಡಿಸುವುದು ಒಳ್ಳೆಯದು. ಕೆಲಸ ಮಾಡದವರಿಗೆ ತೆರಿಗೆದಾರರ ಹಣ ಯಾಕೆ ವ್ಯಯ ಮಾಡಬೇಕು?”
ಮಾಧ್ಯಮ ವರದಿಗಳನ್ನು ನೋಡಿದಾಗ 2017ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಎನ್ ಕೌಂಟರ್ ನ 8,472 ಘಟನೆಗಳು ನಡೆದಿವೆ. ಇದರಿಂದ 146 ಜನರು ಸತ್ತಿದ್ದರೆ, 3,302 ಮಂದಿ ಗಾಯಗೊಂಡಿದ್ದಾರೆ.


2017ರ ನವೆಂಬರ್ ನಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟಗೊಂಡ ಕ್ರಿಮಿನಲ್ಸ್ ವಿಲ್ ಬಿ ಕಿಲ್ಲ್ ಡ್ ಇನ್ ಎನ್ ಕೌಂಟರ್: ಸಿಎಂ ಯೋಗಿ ಆದಿತ್ಯನಾಥ್ ಎಂಬ ಲೇಖನದ ಮೇಲೆ ಎನ್ ಎಚ್ ಆರ್ ಸಿ ಅರಿವಿಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಿತು.
ಉತ್ತರ ಪ್ರದೇಶದ 17 ಪ್ರಕರಣಗಳ ಎನ್ ಕೌಂಟರ್ ಪ್ರಕರಣಗಳ ಪೈಕಿ 14ನ್ನು ಕೈಗೆತ್ತಿಕೊಂಡ ಎನ್ ಎಚ್ ಆರ್ ಸಿ, 12ರಲ್ಲಿ ಯಾವ ಕಪಟವೂ ನಕಲಿತನವೂ ಇಲ್ಲ ಎಂದಿತು. ಒಂದನ್ನು ಉತ್ತರ ಪ್ರದೇಶದ ಮಾನವ ಹಕ್ಕುಗಳ ಆಯೋಗಕ್ಕೆ ಒಪ್ಪಿಸಿತು. ಒಂದು ಘಟನೆಗೆ ಸಂಬಂಧಿಸಿದಂತೆ ಮಾತ್ರ ನಕಲಿ ಎನ್ ಕೌಂಟರ್ ಎಂದು ಹೇಳಿತು.
ವಿಶ್ಲೇಷಕರ ಪ್ರಕಾರ, ಎನ್ ಎಚ್ ಆರ್ ಸಿ ತನಿಖೆ ಬರೇ ಕಣ್ಣೊರೆಸುವ ಕೆಲಸವಾಗಿರುತ್ತದೆ. ಸರಿಯಾದ ತನಿಖೆಯಿಲ್ಲದೆ, ದೂರುದಾರನ ಅಭಿಪ್ರಾಯ ಪಡೆಯದೆಯೇ ಅಂತಿಮ ನಿಲುವಿಗೆ ಬರುವುದು ಎನ್ ಎಚ್ ಆರ್ ಸಿ ಮೊಕದ್ದಮೆಯ ಅಂತಿಮ ವರದಿ ಎಂಬುದೆಲ್ಲ ಮೇಲ್ನೋಟಕ್ಕೆ ಮುಗಿಸಿದ ಪ್ರಕರಣಗಳು ಹೊರತು ಗಂಭೀರವಾಗಿ ಪರಿಗಣಿಸಿದವುಗಳಲ್ಲ.
“ಇವೆಲ್ಲ ಅಂಧ ರೀತಿಯಲ್ಲಿ ಪ್ರಕ್ರಿಯಾವಿಧಿಯ, ವಸ್ತುನಿಷ್ಠತೆಯ ಉಲ್ಲಂಘನೆ ಆಗಿದ್ದು, ದೂರುದಾರರ ಮೇಲೆ ಎಫ್ ಐಆರ್ ಆದರೂ, ಪೊಲೀಸರ ಮೇಲೆ ಎಫ್ ಐಆರ್ ದಾಖಲಾದ ನಿರ್ದಶನವಿಲ್ಲ. ಇಲ್ಲಿ ಪೊಲೀಸ್ ಹೇಳಿಕೆಗೆ ಬದ್ಧತೆ ತೋರುವುದೆಂದರೆ ಅವರ ಸ್ವರಕ್ಷಣೆ ಹೊರತು ದೂರುದಾರನಿಗೆ ನ್ಯಾಯವನ್ನು ಒದಗಿಸುವ ಯಾವ ಉದ್ದೇಶವೂ ಇದ್ದಂತೆ ಕಂಡು ಬರುವುದಿಲ್ಲ. ಯಾವ ಪೊಲೀಸರು ಕೊಲೆಯಲ್ಲಿ ಭಾಗಿಯಾಗಿರುತ್ತಾರೋ ಅದೇ ಠಾಣೆಯಲ್ಲಿ, ಆ ಪೊಲೀಸರಿಂದಲೇ ನ್ಯಾಯ ಬಯಸುವ ವಿಧಾನವು ದೊಡ್ಡ ಹಗಲು ವೇಷದಂತಿದೆ.
ಎನ್ ಎಚ್ ಆರ್ ಸಿ ಒಂದು ಪ್ರಕರಣದಲ್ಲಿ ಮಾತ್ರ ನಕಲಿ ಎನ್ ಕೌಂಟರ್ ಎಂದು ಹೇಳಿದೆ. ಇಲ್ಲಿ ಕೂಡ ಮೃತನ ಕುಟುಂಬಕ್ಕೆ ಪರಿಹಾರ ಧನ ನೀಡಿದ್ದು ಬಿಟ್ಟರೆ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ನ್ಯಾಯದ ಹೆಸರಿನ ಕೊಲೆ, ಅತ್ಯಾಚಾರ, ಹಿಂಸೆ, ಕಾನೂನುಬಾಹಿರ ಬಂಧನ ಈ ಎಲ್ಲ ಪ್ರಕರಣಗಳಲ್ಲಿ ವಿಶೇಷ ಟಾಸ್ಕ್ ಫೋರ್ಸ್ ನವರು ಜವಾಬ್ದಾರರಾದರೂ ಎನ್ ಎಚ್ ಆರ್ ಸಿ ಯಾವುದೇ ಪ್ರಾಸಿಕ್ಯೂಶನ್ ವಾದ ಮುಂದಿಡದಿರುವುದು ದೊಡ್ಡ ಲೋಪ.
ಈ ಎಲ್ಲ 17 ನ್ಯಾಯದ ಹೆಸರಿನ ಕೊಲೆಗಳಲ್ಲಿ ಪೊಲೀಸರು ಬಚಾವಾಗಲು ಕಂಡುಕೊಂಡ ಮಾರ್ಗವೆಂದರೆ ಸ್ವರಕ್ಷಣೆಗಾಗಿ ಎನ್ ಕೌಂಟರ್.
ಈ ಎಲ್ಲ ಪ್ರಕರಣಗಳಲ್ಲಿ, ಅಪರಾಧಿ(ಗಳು) ತಪ್ಪಿಸಿಕೊಳ್ಳಲು ಪೊಲೀಸರತ್ತ ಗುಂಡು ಹಾರಿಸಿದರು. ಪೊಲೀಸರು ಸ್ವರಕ್ಷಣೆಗಾಗಿ ಗುಂಡು ಹಾರಿಸಿದಾಗ ಅವನು(ರು) ಸತ್ತ. ಊರು, ಹೆಸರು, ಜಾಗ ಬದಲಾವಣೆ ಬಿಟ್ಟರೆ ಈ ಮೇಲಿನ ವಾಕ್ಯಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಇಂಥದರಲ್ಲಿ ಕೊಲೆಯಾದವನ ಜೊತೆಗಾರರು ತಪ್ಪಿಸಿಕೊಂಡರು ಎನ್ನುವುದು ಸಹ ಸಾಮಾನ್ಯ.
ಒಂದು ಘಟನೆಗೆ ಒಂದು ಎಫ್ ಐಆರ್ ಮಾತ್ರ ದಾಖಲಿಸಬೇಕು ಎಂಬ ಕಾನೂನು ಇದ್ದರೂ ಎನ್ ಕೌಂಟರ್ ಗೀಡಾದವರ ಮೇಲೆ ಹಲವು ಎಫ್ ಐಆರ್ ದಾಖಲಿಸಿದ್ದುದು ಕೂಡ ಸಾಮಾನ್ಯ.

ಹೆಚ್ಚಿನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗದರ್ಶನ ಮತ್ತು ಮಾನವ ಹಕ್ಕುಗಳ ಆಯೋಗದ ನಿಯಮಾವಳಿಯನ್ನು ಮೀರಿ ಕೊಲೆಗಾರರೆನ್ನಬಹುದಾದ ಪೊಲೀಸರಿಂದಲೇ ತನಿಖೆ ನಡೆಯುತ್ತದೆ, ಪೊಲೀಸರ ವಿಷಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಎನ್ನುವುದು ಕೂಡ ಅಲ್ಲಿ ದಾಖಲಿಗೆ ಇರುತ್ತದೆ ಅಷ್ಟೆ.
ಅಧ್ಯಯನಕಾರರ ಸ್ವತಂತ್ರ ವರದಿ ಪ್ರಕಾರ, ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಮಾಡಿದ ತನಿಖೆಗಳು ಅಸಮರ್ಪಕ. ಪೊಲೀಸರ ಪ್ರಕಾರ ಅವರ ಸ್ವರಕ್ಷಣೆ ಮುಖ್ಯವಾದುದರಿಂದ ಇಲ್ಲಿ ತನಿಖೆ ಎನ್ನುವುದು ಕಣ್ಣೊರೆಸುವ ತಂತ್ರವಷ್ಟೆ ಎನ್ನಬಹುದು. ಶವ ಪರೀಕ್ಷೆ, ಫೋರೆನ್ಸಿಕ್, ಬ್ಯಾಲಿಸ್ಟಿಕ್ ಇತ್ಯಾದಿ ವರದಿಗಳು ಇದ್ದರೂ ಅವಕ್ಕೆಲ್ಲ ಖಚಿತತೆಯ ಬದಲು ವ್ಯತಿರಿಕ್ತವಾದ ಕೊನೆ ಹಾಡುವುದರಲ್ಲಿ ಈ ಜನರು ಬಲ್ಲಿದರು. ಅದಕ್ಕೆಲ್ಲ ಅಗತ್ಯದ ಬಲ ಉಪಯೋಗಿಸುವುದೂ ಇಲ್ಲ.
ಮೇಲಿನ 17 ಪ್ರಕರಣಗಳಲ್ಲಿ 16ರಲ್ಲಿ ಪೊಲೀಸರು ಸಾರ್ವಜನಿಕ ಸಾಕ್ಷಿಗಳನ್ನು ನೀಡಿಲ್ಲ ಎನ್ನುವುದು ಸಹ ವರದಿಯಲ್ಲಿ ಕಂಡುಬಂದಿದೆ.


ಏಳು ಪ್ರಕರಣಗಳಲ್ಲಿ ಕೊಲ್ಲಲ್ಪಟ್ಟವನು ಇಲ್ಲವೇ ಆತನ ಸಹಚರ(ರು) ಆಯುಧಗಳನ್ನು ಹೊಂದಿದ್ದರು. ಆದರೆ ಅವರ ಬೆರಳಚ್ಚುಗಳು ಅದರಲ್ಲಿ ಇರಲಿಲ್ಲ ಎಂಬುದು ವರದಿಯಾಗಿದೆ. ಪೊಲೀಸರು ತಮ್ಮ ಬುಲೆಟ್ ಪ್ರೂಫ್ ಜಾಕೆಟ್ ಗಳು ತೂತಾದುದನ್ನು ಸಹ ಗುಂಡಿನ ಚಕಮಕಿಗೆ ತೋರಿಸಿದ್ದಿದೆ. ತೂತು ಮಾಡಿದ ಗುಂಡು ಯಾವ ಪಿಸ್ತೂಲು ಇಲ್ಲವೇ ಕೋವಿಯದು ಎಂಬ ವಿವರ ಅಗತ್ಯ ಎಂದು ಯಾರೂ ತಲೆ ಕೆಡಿಸಿಕೊಂಡಂತಿಲ್ಲ.ನ್ಯಾಯ ವ್ಯವಸ್ಥೆಯ ಮ್ಯಾಜಿಸ್ಟ್ರೇಟರು ಮುಗಿಸುವುದು ಹೇಗೆ ಎಂಬುದನ್ನು ಪೊಲೀಸರೇ ಮಾಡಿ ಬಿಡುತ್ತಾರೆ. ಮನೆಯವರನ್ನು ಬೆದರಿಸಿ, ನಿಮ್ಮನ್ನೂ ಮೊಕದ್ದಮೆಯಲ್ಲಿ ಸಿಕ್ಕಿಸುವ ಬೆದರಿಕೆ, ಎಲ್ಲವನ್ನೂ ಮುಗಿದರೆ ಸಾಕು ಎಂಬಲ್ಲಿಗೆ ಮುಟ್ಟಿಸುತ್ತಾರೆ. ಮ್ಯಾಜಿಸ್ಟ್ರೇಟರು ಕೂಡ ಒಂದಾದರೂ ಮುಗಿಯಿತಲ್ಲ ಎಂದು ಸಹಿ ಹಾಕುತ್ತಾರೆ.


ಪೊಲೀಸರ ಸಹಾಯ ಇಲ್ಲ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಬೆಂಬಲಕ್ಕಿಲ್ಲ ಎಂದರೆ ಬಲಿಯಾದ ವ್ಯಕ್ತಿಯ ಮನೆಯವರೇ ತನಿಖೆ ನಡೆಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ!
ಒಟ್ಟಾರೆ ಪೊಲೀಸರಿಂದ ನಡೆಯುವ ಎನ್ ಕೌಂಟರ್ ಕೊಲೆಗಳಿಗೆ ಅವರನ್ನು ಜವಾಬ್ದಾರರನ್ನಾಗಿಸುವಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಫಲವಾಗಿದೆ ಎಂಬುದು ವರದಿಯಲ್ಲಿ ಸ್ಪಷ್ಟವಿದೆ. ಪೊಲೀಸ್ ಬಲ ಉಪಯೋಗಿಸಿ ನಡೆಸಿದ (ಉತ್ತರ ಪ್ರದೇಶದ) ಕೊಲೆಗಳಿಗೆ ಪೊಲೀಸರನ್ನು ಜವಾಬ್ದಾರರಾಗಿಸುವಲ್ಲಿ ನ್ಯಾಯ ವ್ಯವಸ್ಥೆಯು ಸಫಲವಾಗುವ ಉಪಾಯ ಕಾಣಿಸುತ್ತಿಲ್ಲ.

Join Whatsapp
Exit mobile version