Home ಟಾಪ್ ಸುದ್ದಿಗಳು ಮುಂದಿನ ಆಂದೋಲನದಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲಾಗುತ್ತದೆ : ರೈತ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ

ಮುಂದಿನ ಆಂದೋಲನದಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲಾಗುತ್ತದೆ : ರೈತ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ

ದೆಹಲಿ ಘಾಝಿಪುರ ಗಡಿಯಲ್ಲಿ ರೈತ ಹೋರಾಟ ತಡೆಯಲು ಬ್ಯಾರಿಕೇಡ್ ಹಾಕಿದರೆ ಅದನ್ನು ಮುಂದಿನ ಆಂದೋಲನದಲ್ಲಿ ಮುರಿಯಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ಇದರ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಆಂದೋಲನದ ಸಮಯದಲ್ಲಿ ಯಾವುದೇ ಬ್ಯಾರಿಕೇಡ್ ಇಡಬಾರದು ಮತ್ತು ಹಾಗೊಂದು ವೇಳೆ ಇರಿಸಿದರೆ ಅದನ್ನು ಮುರಿದು ಹಾಕುತ್ತೇವೆ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.

ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸುವ ಸಲುವಾಗಿ ಮುಂದಿನ ಕ್ರಮಗಳ ವಿವರಗಳನ್ನು ಬಹಿರಂಗಪಡಿಸಿದ ಟಿಕಾಯತ್, ಟ್ರಾಕ್ಟರುಗಳು ರೈತರ ಟ್ಯಾಂಕ್‌ಗಳಾಗಿವೆ ಎಂದು ಹೇಳಿದರು. ಅನಿರ್ದಿಷ್ಟಾವಧಿಯ ಪ್ರತಿಭಟನೆಗೆ 1 ಗ್ರಾಮ, 1 ಟ್ರಾಕ್ಟರ್ ಮತ್ತು 15 ರೈತರನ್ನು ಒಳಗೊಂಡಿರುವ ಕಾರ್ಯತಂತ್ರವನ್ನು ಸಿದ್ಧಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಮೋದಿ ಆಡಳಿತ ಮಂಡಳಿಯು ಕಾರ್ಪೊರೇಟ್‌ಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ಉದ್ಯಮಿಗಳು ಏನು ಮಾಡಬೇಕೆಂದು ಹೇಳುತ್ತಾರೋ ಅದನ್ನು ಸರ್ಕಾರ ನಿಖರವಾಗಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರ ಮತ್ತು ರೈತರು 11 ಸುತ್ತಿನ ಮಾತುಕತೆ ನಡೆಸಿದ್ದಾರೆ ಆದರೆ ಕೃಷಿ ಕಾನೂನುಗಳ ಮೇಲೆ ಇರುವ ಲೋಪಗಳನ್ನು ಕೊನೆಗೊಳಿಸಲು ಸರ್ಕಾರ ವಿಫಲವಾಗಿದೆ. ಜನವರಿ 22 ರಂದು ಕೊನೆಯ ಸುತ್ತಿನ ಸಭೆ ನಡೆಯಿತು ಮತ್ತು ಜನವರಿ 26 ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಸರ್ಕಾರ ಪೂರ್ವ ನಿಯೋಜಿತವಾಗಿ ತೊಂದರೆ ಉಂಟುಮಾಡಿದೆ ಎಂದು ಟಿಕಾಯತ್ ಆರೋಪಿಸಿದ್ದಾರೆ.

Join Whatsapp
Exit mobile version