ಬಾಗ್ದಾದ್ : ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕ ಸೇನಾ ಪಡೆಗಳು 2014ರ ಬಳಿಕ, ಕೇವಲ ಆರು ವರ್ಷದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 13,000 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
2014ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಡಾಯಿಷ್ ಗಳ ವಿರುದ್ಧದ ಯುದ್ಧವೆನ್ನಲಾದ ಅಮೆರಿಕ ನೇತೃತ್ವದ ದಾಳಿಯ ಆರಂಭದ ಬಳಿಕ, ಇದೇ ಮೊದಲ ಬಾರಿ ಎರಡು ರಾಷ್ಟ್ರಗಳಲ್ಲಿ ನಾಗರಿಕರ ಸಾವು ಮತ್ತು ಹಾನಿಗಳ ಕುರಿತ ವರದಿ ಬಹಿರಂಗವಾಗಿದೆ.
ಏರ್ ವಾರ್ಸ್ ಎಂಬ ಸಂಸ್ಥೆ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ, ಅಮೆರಿಕ ನೇತೃತ್ವದ ಮೈತ್ರಿ ಪಡೆಗಳ ದಾಳಿಯಲ್ಲಿ ಸುಮಾರು 8,310ರಿಂದ 13,187 ಸಾವುಗಳು ಸಂಭವಿಸಿವೆ. 341 ನಂಬಲರ್ಹ ನಾಗರಿಕ ದಾಳಿಗಳು ನಡೆದಿವೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.