Home ಗಲ್ಫ್ ಕುರ್‌ಆನ್‌, ಸಹೀಹುಲ್ ಬುಖಾರಿ ಅನುವಾದಿಸಿದ್ದ ಖ್ಯಾತ ವಿದ್ವಾಂಸ ಡಾ.ಮುಹಮ್ಮದ್ ಮುಹ್ಸಿನ್ ಖಾನ್ ನಿಧನ

ಕುರ್‌ಆನ್‌, ಸಹೀಹುಲ್ ಬುಖಾರಿ ಅನುವಾದಿಸಿದ್ದ ಖ್ಯಾತ ವಿದ್ವಾಂಸ ಡಾ.ಮುಹಮ್ಮದ್ ಮುಹ್ಸಿನ್ ಖಾನ್ ನಿಧನ

ಮದೀನಾ: ಪವಿತ್ರ ಕುರ್‌ಆನ್‌ ಅನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದ ಹಿರಿಯ ವಿದ್ವಾಂಸ ಡಾ.ಮುಹಮ್ಮದ್ ಮುಹ್ಸಿನ್ ಖಾನ್ ಬುಧವಾರ ಬೆಳಗ್ಗೆ ಪವಿತ್ರ ನಗರ ಮದೀನಾದಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಮದೀನಾದ ಜನ್ನತುಲ್ ಬಕೀಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.


ಮುಹ್ಸಿನ್ ಖಾನ್ ಅವರು ಕುರ್ ಆನ್ ಗ್ರಂಥವನ್ನು ಡಾ.ಮುಹಮ್ಮದ್ ತಾಖಿವುದ್ದೀನ್ ಅಲ್ ಹಿಲಾಲಿ ಅವರೊಂದಿಗೆ ಸೇರಿ ಇಂಗ್ಲೀಷ್ ಗೆ ಅನುವಾದಿಸಿದ್ದರು. ಮಾತ್ರವಲ್ಲ ಸಹೀಹುಲ್ ಬುಖಾರಿ ಗ್ರಂಥವನ್ನೂ ಇಂಗ್ಲೀಷ್ ಗೆ ಅನುವಾದಿಸಿದ ಮೊದಲ ವಿದ್ವಾಂಸ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.


1927 ರಲ್ಲಿ ಪಾಕಿಸ್ತಾನದ ಕಸೂರ್‌ ಎಂಬಲ್ಲಿ ಡಾ. ಮುಹ್ಸಿನ್ ಖಾನ್ ಜನಿಸಿದ್ದರು. ಅವರ ತಾತ ಮತ್ತು ಅಜ್ಜಿ ಅಫ್ಘಾನಿಸ್ತಾನದ ಕಂದಾರ್ ನಿಂದ ಪಾಕಿಸ್ತಾನಕ್ಕೆ ವಲಸೆ ಹೋದವರಾಗಿದ್ದಾರೆ.
ಡಾ. ಮುಹ್ಸಿನ್ ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಿಂದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದರು. ನಂತರ ಲಾಹೋರ್‌ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ್ದರು. ನಂತರ ಅವರು ಇಂಗ್ಲೆಂಡ್ ಗೆ ಪ್ರಯಾಣಿಸಿದರು, ಪಶ್ಚಿಮದಲ್ಲಿ ಯಾರೊಬ್ಬರೂ ಅಷ್ಟೇನೂ ಅಧ್ಯಯನ ಮಾಡದ ಸಮಯದಲ್ಲಿ, ಅವರು 1950ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ವೈದ್ಯಕೀಯ ತರಬೇತಿಯನ್ನು ಪೂರ್ಣಗೊಳಿಸಿದರು. ಅಲ್ಲಿ ಅವರು ವೇಲ್ಸ್ ವಿಶ್ವವಿದ್ಯಾಲಯದಿಂದ ಎದೆ ರೋಗಗಳ ವಿಷಯದಲ್ಲಿ ಡಿಪ್ಲೊಮಾ ಪಡೆದರು.


ಶಿಕ್ಷಣ ಮುಗಿಸಿದ ನಂತರ, ಅವರು ಹೊಸದಾಗಿ ರೂಪುಗೊಂಡ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಧೀನದಲ್ಲಿ ತಾಯಿಫ್ ನಗರದಲ್ಲಿ ವೃತ್ತಿ ಆರಂಭಿಸಿದರು. ಮೊದಲಿಗೆ ಎಲ್-ಸದಾದ್ ಆಸ್ಪತ್ರೆಯ ನಿರ್ದೇಶಕರಾಗಿ ಕೆಲಸ ಮಾಡಿದರು, ನಂತರ ಅವರು ಮದೀನಾಕ್ಕೆ ತೆರಳಿದರು, ಅಲ್ಲಿ ಅವರು ಕಿಂಗ್ಸ್ ಆಸ್ಪತ್ರೆಯಲ್ಲಿ ಎದೆ ರೋಗಗಳ ವಿಭಾಗದ ಮುಖ್ಯಸ್ಥರಾಗಿ ಸೇರಿದರು. ಬಳಿಕ ಅವರು ಮದೀನಾದ ಇಸ್ಲಾಮಿಕ್ ಯೂನಿವರ್ಸಿಟಿ ಕ್ಲಿನಿಕ್ ನ ನಿರ್ದೇಶಕರಾಗಿ ಕೆಲಸ ಮಾಡಿದರು.


1961 ರಲ್ಲಿ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಮದೀನಾ ಆರಂಭಿಸಿದಾಗ, ಅವರನ್ನು ಅಲ್ಲಿಗೆ ವರ್ಗಾಯಿಸಲಾಯಿತು. ನಾಝಿ ಆಡಳಿತವಿದ್ದಾಗ ಜರ್ಮನಿಯಲ್ಲಿ ಪಿಎಚ್‌ಡಿ ಮುಗಿಸಿದ ಮುಹ್ಸಿನ್ ಖಾನ್ ಅವರು ಕುರ್ ಆನ್ ಗ್ರಂಥವನ್ನು ಇಂಗ್ಲಿಷ್ ಗೆ ಅನುವಾದ ಮಾಡಿದ್ದರು. ಸಹೀಹ್ ಗ್ರಂಥವನ್ನೂ ಇಂಗ್ಲಿಷ್ ಗೆ ಭಾಷಾಂತರ ಮಾಡಿದರು.
ಮುಹ್ಸಿನ್ ಖಾನ್ ಅವರ ನಿಧನಕ್ಕೆ ಜಗತ್ತಿನ ಅನೇಕ ದೇಶಗಳು, ವಿದ್ವಾಂಸರು ಕಂಬನಿ ಮಿಡಿದಿದ್ದಾರೆ.

Join Whatsapp
Exit mobile version