Home ರಾಜ್ಯ ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆ: ಪೋಷಕರ ಆಕ್ರೋಶ

ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆ: ಪೋಷಕರ ಆಕ್ರೋಶ

ದಾವಣಗೆರೆ: ಹೆರಿಗೆಯಾದ 2 ಗಂಟೆಯಲ್ಲೇ ನವಜಾತ ಶಿಶು ಆಸ್ಪತ್ರೆಯಿಂದ ನಾಪತ್ತೆಯಾದ ಘಟನೆ ನಗರದ ಚಾಮರಾಜಪೇಟೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾರ್ಚ್ 16 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಉಮ್ಮು ಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಯ ಮೊದಲ ಮಗು ಇದಾಗಿದ್ದು, ಜನಿಸಿ 2 ಗಂಟೆಯ ಬಳಿಕ ಗ೦ಡು ಮಗು ಎಲ್ಲರ ಸಮ್ಮುಖದಲ್ಲೇ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಮಗು ಕೊಡುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪೋಷಕರು ಮತ್ತು ಸಂಬಂಧಿಕರು ಅಸತ್ರೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

Join Whatsapp
Exit mobile version