ಬಸ್ ನಿಲ್ದಾಣದ ಗೋಣಿ ಚೀಲದಲ್ಲಿ ಸಿಕ್ಕಿತು ನವಜಾತ ಶಿಶು!

Prasthutha|

ಕಾರವಾರ: ಬಸ್ ನಿಲ್ದಾಣದಲ್ಲಿರಿಸಿದ್ದ ಗೋಣಿ ಚೀಲದಲ್ಲಿ ನವಜಾತ ಶಿಶು ಸಿಕ್ಕ ಘಟನೆ ಶಿರಸಿ ತಾಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ ನಡೆದಿದೆ.

- Advertisement -

ಮಾದೇವಿ ಎಂಬವರು ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಎಂದಿನಂತೆ ಇಂದು ನಿಲ್ದಾಣಕ್ಕೆ ಬಂದಾಗ ಚೀಲ ಪತ್ತೆಯಾಗಿದೆ. ಯಾರೋ ಮರೆತು ಹೋಗಿರಬೇಕು ಎಂದು ಆ ಚೀಲವನ್ನು ಮನೆಗೆ ತಂದು ನೋಡಿದ್ದಾರೆ. ಈ ವೇಳೆ ಚೀಲ ಬಿಚ್ಚುತ್ತಿದ್ದಂತೆ ಮಗು ಅಳುವುದು ಕೇಳಿಸಿದೆ. ಭಯಗೊಂಡ ಮಾದೇವಿ ಸ್ಥಳೀಯರಿಗೆ ಮಾಹಿತಿ ನೀಡಿ ನಂತರ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.


ಸದ್ಯ ಈ ಮಗುವನ್ನು ಶಿರಸಿಯ ಸಹಾಯ ಟ್ರಸ್ಟ್ ಗೆ ಹಸ್ತಾಂತರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಕ್ಕಳ ತುರ್ತು ನಿಗಾ ಘಟಕದಲ್ಲಿರಿಸಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Join Whatsapp