Home ಟಾಪ್ ಸುದ್ದಿಗಳು ಐಸಿಸಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ನ್ಯೂಜಿಲೆಂಡ್ ನ ಗ್ರೆಗ್ ಬಾರ್ಕ್ಲೇ ಆಯ್ಕೆ

ಐಸಿಸಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ನ್ಯೂಜಿಲೆಂಡ್ ನ ಗ್ರೆಗ್ ಬಾರ್ಕ್ಲೇ ಆಯ್ಕೆ

ಮೆಲ್ಬರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ನ್ಯೂಜಿಲೆಂಡ್ ಕ್ರಿಕೆಟ್‌ ನ ಮಾಜಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೇ ಅವರು ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೆಲ್ಬರ್ನ್ ನಲ್ಲಿ ಶನಿವಾರ  ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಡಾ. ತವೆಂಗ್ವಾ ಮುಕುಹ್ಲಾನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ, ಐಸಿಸಿ ಬೋರ್ಡ್ ಸದಸ್ಯರ ಒಮ್ಮತದ ಆಯ್ಕೆಯಾಗಿ ಎರಡನೇ ಬಾರಿ ಗ್ರೆಗ್ ಬಾರ್ಕ್ಲೇ ಆಯ್ಕೆಯಾದರು. ಈ ಮೂಲಕ 2020ರ ಬಳಿಕ 2022ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ 2 ವರ್ಷಗಳ ಅಧಿಕಾರವಧಿಯನ್ನು ಹಿಡಿದಿದ್ದಾರೆ. 2024ರ ವರೆಗೆ ಗ್ರೆಗ್ ಬಾರ್ಕ್ಲೇ ಅಧ್ಯಕ್ಷರಾಗಿರಲಿದ್ದಾರೆ.

2015ರ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ನ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಗ್ರೆಗ್ ಬಾರ್ಕ್ಲೇ, ನಾರ್ಥನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ನ ಸದಸ್ಯರಾಗಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ ಹಲವು ಕಂಪನಿಗಳಲ್ಲಿ ಬೋರ್ಡ್  ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಇವರಿಗಿದೆ.

Join Whatsapp
Exit mobile version