ವೆಲ್ಲಿಂಗ್ಟನ್: ಒಮಿಕ್ರಾನ್ ವೈರಸ್ ಸೋಂಕಿನ ಭೀತಿ ಹಿನ್ನೆಲೆ ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್, ರವಿವಾರ ತಮ್ಮದೇ ವಿವಾಹವನ್ನು ರದ್ದುಪಡಿಸಿದ್ದಾರೆ.
ಸಂಪೂರ್ಣ ಲಸಿಕೆ ಹಾಕಿಸಿಕೊಂಡ 100 ಮಂದಿ ಮಾತ್ರ ಒಂದೆಡೆ ಸೇರಲು ಅವಕಾಶ ನೀಡುವ ಬಿಗಿ ನಿರ್ಧಾರವನ್ನು ಪ್ರಕಟಿಸಿದ ನ್ಯೂಝಿಲೆಂಡ್ ಪ್ರಧಾನಿ, “ಸ್ವತಃ ತಾನು ಕೂಡಾ ವಿವಾಹ ಸಮಾರಂಭ ರದ್ದುಪಡಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಈ ಸಾಂಕ್ರಾಮಿಕದ ಅನುಭವವನ್ನು ದೇಶದ ಸಹ ಪ್ರಜೆಗಳಂತೆ ನಾನೂ ಪಡೆಯುತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಸಿಲುಕಿಕೊಂಡರೆ ಕ್ಷಮೆ ಇರಲಿ” ಎಂದು ತಿಳಿಸಿದ್ದಾರೆ.