Home ಟಾಪ್ ಸುದ್ದಿಗಳು ಹೊಸ ವರ್ಷಾಚರಣೆ; ರಾತ್ರಿ 10 ಬಳಿಕ ಡಿಜೆ ಸೌಂಡ್ ಗೆ ಬ್ರೇಕ್: ಉಡುಪಿ ಎಸ್ ಪಿ

ಹೊಸ ವರ್ಷಾಚರಣೆ; ರಾತ್ರಿ 10 ಬಳಿಕ ಡಿಜೆ ಸೌಂಡ್ ಗೆ ಬ್ರೇಕ್: ಉಡುಪಿ ಎಸ್ ಪಿ

ಉಡುಪಿ: ಈ ಬಾರಿಯ ಹೊಸ ವರ್ಷ ಆಚರಿಸಲು ಕಾರ್ಯಕ್ರಮ ಆಯೋಜಕರಿಗೆ ಮಧ್ಯರಾತ್ರಿ 12.30 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾತ್ರಿ 10 ಗಂಟೆಯಿಂದ ಧ್ವನಿ ವರ್ಧಕ ಬಳಸಲು ಅವಕಾಶ ಇರುವುದಿಲ್ಲ. ಬಳಿಕ ಧ್ವನಿವರ್ಧಕ ಇಲ್ಲದೆ ಅಥವಾ ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಡಿ.31ರ ರಾತ್ರಿ ವೇಳೆ ಉಡುಪಿ ಜಿಲ್ಲೆಯ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಬೀಚ್ ನಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆ, ಕಳ್ಳತನ, ಅಸಭ್ಯ ವರ್ತನೆ ಗಳು ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇದಕ್ಕೆ ತಕ್ಷಣವೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲು ಆಗುತ್ತದೆ ಎಂದು ಅವರು ಹೇಳಿದರು.

Join Whatsapp
Exit mobile version