ಮದೀನಾ: ನ್ಯೂ ವೆಲ್ ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವಾರ್ಷಿಕ ಮಹಾಸಭೆಯು ಮುಬೀನ್ ಮುಲ್ಕಿಯವರ ನಿವಾಸದಲ್ಲಿ ನಡೆಯಿತು.
ಸಭಾಧ್ಯಕ್ಷರಾಗಿದ್ದ ಹಸೈನಾರ್ ಫರಂಗಿಪೇಟೆ ನ್ಯೂ ವೆಲ್ಫೇರ್ ನ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ವಿವರಿಸಿದರು. ಕಾರ್ಯದರ್ಶಿ ಹಬೀಬ್ ಅಳಕೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಹಳೆಯ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಅಧ್ಯಕ್ಷರಾಗಿ ಹಸೈನಾರ್ ಫರಂಗಿಪೇಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಬೀಬ್ ಅಳಕೆ, ಇಬ್ರಾಹೀಂ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸುರಿಬೈಲ್, ಜೊತೆಕಾರ್ಯದರ್ಶಿಗಳಾಗಿ ಶಂಸುದ್ದೀನ್ ಮುರುಗೋಳಿ, ಸಾದಿಕ್ ಮೆಲ್ಕಾರ್ ಕೋಶಾಧಿಕಾರಿಯಾಗಿ ಮುಬೀನ್ ಮುಲ್ಕಿ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಸುದ್ದೀನ್ ಉಳ್ಳಾಲ, ಆಸಿಫ್ ಕುಂಜತ್ ಬೈಲ್ ಆಯ್ಕೆಯಾದರು.
ಅಝೀಝ್ ಸುರಿಬೈಲ್ ಸ್ವಾಗತಿಸಿದರು. ಹಬೀಬ್ ಅಳಕೆ ಧನ್ಯವಾದ ಸಲ್ಲಿಸಿದರು..