Home ಟಾಪ್ ಸುದ್ದಿಗಳು ಎಚ್ ಐಎಫ್ ನಿಂದ ದುಬೈ ಬದ್ರಿಯಾ ಫ್ರೆಂಡ್ಸ್ ಸಹಯೋಗದೊಂದಿಗೆ ನೂತನ ಮಸೀದಿ ಲೋಕಾರ್ಪಣೆ

ಎಚ್ ಐಎಫ್ ನಿಂದ ದುಬೈ ಬದ್ರಿಯಾ ಫ್ರೆಂಡ್ಸ್ ಸಹಯೋಗದೊಂದಿಗೆ ನೂತನ ಮಸೀದಿ ಲೋಕಾರ್ಪಣೆ

ಬೆಂಗಳೂರು: ಎಚ್ ಐಎಫ್ ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಹಯೋಗದೊಂದಿಗೆ ಕರ್ನಾಟಕ ಆಂಧ್ರ ಗಡಿಭಾಗದ ಅಬ್ದುಲ್ಲಾ ಸಾಬ್ ಬಸ್ತಿ ಎಂಬಲ್ಲಿ ಸುಸಜ್ಜಿತ ನೂತನ ಮಸೀದಿಯನ್ನು ನಿರ್ಮಿಸಲಾಗಿದ್ದು, ಇದನ್ನು ಮೊಹಿದ್ದೀನ್ ಉಸ್ಮಾನ್ ಕಂದಕ್ ಉದ್ಘಾಟಿಸಿದರು. ಸ್ಥಳೀಯ ಖಾಜಿ ಮೌಲಾನ ರಿಯಾಝ್ ಅಹ್ಮದ್ ದುವಾ ನೆರವೇರಿಸಿದರು.

ಎಹ್ಸಾನ್ ಮಸೀದಿಯ ಕಾರ್ಯದರ್ಶಿ ಹನೀಫ್ ಪಿ ಎಸ್, ಬಾವ ಉಳ್ಳಾಲ್, ಉದ್ಯಮಿ ತಸ್ಲಿಮ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಎಚ್ ಐ ಎಫ್ ಅಧ್ಯಕ್ಷ ನಾಜಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಒಮ್ಮೆಲೆ ಸುಮಾರು 500ಕ್ಕೂ ಹೆಚ್ಚು ಜನ ನಮಾಝ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದಂತ ಜುಮಾ ಮಸೀದಿಯಾಗಿದೆ. ಬದ್ರಿಯಾ ಫ್ರೆಂಡ್ಸ್ ದುಬೈ ವತಿಯಿಂದ ಮಸೀದಿಯ ನಿರ್ಮಾಣ ವೆಚ್ಚವನ್ನು ಬರಿಸಲಾಯಿತು. ಎಚ್ ಐ ಎಫ್ ಎಂ.ಡಿ.ಪಿ ಮಸ್ಜಿದ್ ಡೆವಲಪ್ಮೆಂಟ್ ಪ್ರಾಜೆಕ್ಟ್ ವತಿಯಿಂದ ನಿರ್ಮಿತವಾದ 7 ಮಸೀದಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version