UAE ಕ್ಯಾಬಿನೆಟ್ ಗೆ ಹೊಸ ಸಚಿವರ ನೇಮಕ

Prasthutha|

ಅಬುಧಾಬಿ: ಯುಎಇ ಕ್ಯಾಬಿನೆಟ್ ಗೆ ಹೊಸ ಸಚಿವರನ್ನು ನೇಮಕ ಮಾಡಲಾಗಿದ್ದು, ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರ ಉಪಸ್ಥಿತಿಯಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

- Advertisement -

ಅಬುಧಾಬಿಯ ರಾಜಕುಮಾರ ಮತ್ತು ಯುಎಇಯ ಉಪ ಕಮಾಂಡರ್-ಇನ್-ಚೀಫ್ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಬುಧಾಬಿ ರಾಜಕುಮಾರ ಅವರು ಸಮಾರಂಭದಲ್ಲಿ ಭಾಗವಹಿಸಿದ್ದಾಗಿ ಟ್ವೀಟ್ ಮಾಡಿದ್ದಾರೆ. ಶೈಖ್ ಮಖ್ತೂಮ್ ಬಿನ್ ಮುಹಮ್ಮದ್ ಉಪ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು.

- Advertisement -

ಮುಹಮ್ಮದ್ ಬಿನ್ ಹಾದಿ ಅಲ್ ಹುಸೈನಿ (ಹಣಕಾಸು ಸಹ ಸಚಿವ), ಅಬ್ದುಲ್ಲಾ ಬಿನ್ ಅಲ್ ನುಹೈಮಿ (ನ್ಯಾಯಾಂಗ ಲಾಖೆ), ಅಬ್ದುಲ್ ರಹಮಾನ್ ಅಲ್ ಅವರ್ (ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ), ಮರಿಯಮ್ ಅಲ್ ಮುಹೈರಿ (ಹವಾಮಾನ, ಪರಿಸರ ಮತ್ತು ಆಹಾರ ಭದ್ರತೆ) ಮತ್ತು ಅಬ್ದುಲ್ಲಾ ಬಿನ್ ಮುಹೈರ್ ಅಲ್ ಕೆತ್ಬಿ (ಫೆಡರಲ್ ಸುಪ್ರೀಂ ಕೌನ್ಸಿಲ್) ಅಧಿಕಾರ ವಹಿಸಿಕೊಂಡರು.

Join Whatsapp