ನವದೆಹಲಿ : ಡಿಜಿಟಲ್ ನ್ಯೂಸ್ ಪೋರ್ಟಲ್ ಗಳನ್ನು ನಿಯಂತ್ರಿಸುವ ಕೇಂದ್ರ ಸರಕಾರದ ನೂತನ ಐಟಿ ನಿಯಮಗಳನ್ನು ಪಾಲಿಸಲು ಆದೇಶಿಸಲಾದ ಮೇ 28ರ ನೋಟಿಸ್ ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಐಟಿ ನಿಯಮಗಳ ಆದೇಶಕ್ಕೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್ ಗೆ ಕ್ವಿಂಟ್ ಡಿಜಿಟಲ್ ಮೀಡಿಯಾ ಲಿಮಿಟೆಡ್ ಮತ್ತು ಅದರ ನಿರ್ದೇಶಕ ರಿತು ಕಪೂರ್, ದ ವೈರ್ ನ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ, ಆಲ್ಟ್ ನ್ಯೂಸ್ ನ ಪ್ರೌದ ಮೀಡಿಯಾ ಫೌಂಡೇಶನ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು.
ಇತ್ತೀಚಿನ ನೋಟಿಸ್ ಕೇವಲ ಜಾರಿಗೊಳಿಸುವ ಉದ್ದೇಶ ಹೊಂದಿದೆ ಮತ್ತು ಅರ್ಜಿದಾರರು ರೋಸ್ಟರ್ ಪೀಠದಿಂದ ತಡೆ ಪಡೆಯಲು ಸಾಧ್ಯವಾಗಿಲ್ಲ ಎಂದು ನ್ಯಾ. ಹರಿಶಂಕರ್ ಮತ್ತು ನ್ಯಾ. ಸುಬ್ರಹ್ಮಣಿಯಂ ಪ್ರಸಾದ್ ನ್ಯಾಯಪೀಠ ತಿಳಿಸಿದೆ.