Home ಟಾಪ್ ಸುದ್ದಿಗಳು ಹೊಸ IPC, CRPC  ಕರಡು ಮಸೂದೆ ಶೀಘ್ರದಲ್ಲೇ ಪರಿಚಯಿಸಲಾಗುವುದು : ಅಮಿತ್ ಶಾ

ಹೊಸ IPC, CRPC  ಕರಡು ಮಸೂದೆ ಶೀಘ್ರದಲ್ಲೇ ಪರಿಚಯಿಸಲಾಗುವುದು : ಅಮಿತ್ ಶಾ

ನವದೆಹಲಿ: ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಹೊಸ ಕರಡು ಮಸೂದೆಗಳನ್ನು ಸರ್ಕಾರ ಶೀಘ್ರದಲ್ಲೇ ಸಂಸತ್ತಿನಲ್ಲಿ ಪರಿಚಯಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹರಿಯಾಣದ ಸೂರಜ್ಕುಂಡ್ ನಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಸಚಿವಾಲಯಗಳ ‘ಚಿಂತನ ಶಿಬಿರ’ವನ್ನುದ್ದೇಶಿಸಿ ಮಾತನಾಡಿದ ಅವರು,  ಸಿಆರ್ ಪಿಸಿ ಮತ್ತು ಐಪಿಸಿಯನ್ನು ಸುಧಾರಿಸಲು ಸರ್ಕಾರವು ಹಲವಾರು ಸಲಹೆಗಳನ್ನು ಸ್ವೀಕರಿಸಿದೆ. ನಾವು ಶೀಘ್ರದಲ್ಲೇ ಹೊಸ ಸಿಆರ್ ಪಿಸಿ, ಐಪಿಸಿ ಕರಡುಗಳನ್ನು ಸಂಸತ್ತಿನಲ್ಲಿ ತರುತ್ತೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ‘ವಿಷನ್ 2047’ ಮತ್ತು ‘ಪಂಚ ಪ್ರಾಣ್’ ಅನುಷ್ಠಾನಕ್ಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಉದ್ದೇಶದಿಂದ ‘ಚಿಂತನ್ ಶಿಬಿರ್’ ಅನ್ನು ಆಯೋಜಿಸಲಾಗಿದೆ.

Join Whatsapp
Exit mobile version