ಮಕ್ಕಾ, ಮದೀನಾ ಮಸೀದಿಗಳಿಗೆ ನೂತನ ಇಮಾಮ್, ಖತೀಬರುಗಳ ನೇಮಕ

Prasthutha|

ರಿಯಾದ್ : ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್  ಎರಡು ಪವಿತ್ರ ಮಸೀದಿಗಳಿಗೆ ನೂತನ ಇಮಾಮ್ ಮತ್ತು ಖತೀಬರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

ಮಸ್ಜಿದುಲ್ ಹರಾಮ್ ಗೆ ನೇಮಕಗೊಂಡವರು:

ಮಸ್ಜಿದ್ ಅಲ್ ಹರಮ್’ನಲ್ಲಿ ರಮಝಾನ್ ಸಮಯದಲ್ಲಿ ತರಾವೀಹ್ ಅನ್ನು ಮುನ್ನಡೆಸುತ್ತಿದ್ದ ಶೇಖ್ ಯಾಸಿರ್ ಅಲ್ ದೋಸರಿ ಅವರನ್ನು ಖಾಯಂ ಇಮಾಮ್ ಆಗಿ, 10 ವರ್ಷಗಳಿಂದ ಇಮಾಮ್ ಆಗಿರುವ ಶೇಖ್ ಅಬ್ದುಲ್ಲಾ ಅವದ್ ಅಲ್ ಜುಹಾನಿ ಅವರನ್ನು ಖತೀಬ್ ಆಗಿ, 5 ವರ್ಷಗಳ ಕಾಲ ಇಮಾಮ್ ಆಗಿದ್ದ ಶೇಖ್ ಬಂದರ್ ಬಲೀಲಾ ಅವರನ್ನು ಖತೀಬ್ ನೇಮಿಸಲಾಗಿದೆ.

- Advertisement -
ಶೇಖ್ ಯಾಸಿರ್ ಅಲ್ ದೋಸರಿ,ಶೇಖ್ ಅಬ್ದುಲ್ಲಾ ಅವದ್ ಅಲ್ ಜುಹಾನಿ.ಶೇಖ್ ಬಂದರ್ ಬಲೀಲಾ

ಮಸ್ಜಿದುನ್ನಬವಿಗೆ ನೇಮಕಗೊಂಡವರು;

ಮಸ್ಜಿದುನ್ನಬವಿಯ ಇಮಾಮ್ ಆಗಿದ್ದ ಶೇಖ್ ಅಹ್ಮದ್ ತಾಲಿಬ್ ಹಮೀದ್ ಅವರನ್ನು ಖತೀಬ್ ಆಗಿ, ತರಾವೀಹ್ ಗೆ ಅತಿಥಿ ಇಮಾಮ್ ಆಗಿದ್ದ ಶೇಖ್ ಅಹ್ಮದ್ ಹುದೈಫ್, ಶೇಖ್ ಖಾಲಿದ್ ಮುಹಾನಾ ಅವರನ್ನು ಖಾಯಂ ಇಮಾಮ್ ಆಗಿ ನೇಮಿಸಲಾಗಿದೆ.

ಶೇಖ್ ಅಹ್ಮದ್ ತಾಲಿಬ್ ಹಮೀದ್,ಶೇಖ್ ಅಹ್ಮದ್ ಹುದೈಫ್, ಶೇಖ್ ಖಾಲಿದ್ ಮುಹಾನಾ
Join Whatsapp