ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ನಂತರ ಜೆಡಿಎಸ್ ಪಾಳಯದಲ್ಲಿ ತೀವ್ರ ಗೊಂದಲ ಉಂಟಾಗಿದ್ದು ಇಂದು ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜೆಡಿಎಸ್ ವಕ್ತಾರರು ದೌಡಾಯಿಸಿದ್ದಾರೆ.
ಜೆಡಿಎಸ್ ನಲ್ಲಿ ಕೇವಲ 32 ಮತಗಳಿದ್ದು ಸ್ಥಾನ ಭದ್ರಪಡಿಸಲು ಇನ್ನೂ 13 ಮತಗಳ ಅನಿವಾರ್ಯತೆಯಿದೆ. ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಕಾಂಗ್ರೆಸ್ ಪಾಳಯದಿಂದ ಅನಿವಾರ್ಯ ಮತಗಳ ಅಗತ್ಯತೆಯಿದ್ದು ಆ ಹಿನ್ನಲೆಯಲ್ಲಿ ಎಚ್ ಡಿ ರೇವಣ್ಣ ಮುಂತಾದ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಮತ್ತಿತರ ನಾಯಕರ ಜೊತೆ ಮಾತುಕತೆಗೆ ಮುಂದಾಗಿದ್ದಾರೆ.