Home ಟಾಪ್ ಸುದ್ದಿಗಳು ಹೊಸ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ

ಹೊಸ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ

ಬಳ್ಳಾರಿ: ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೆಆರ್​ ಪಿ‌ ಪಕ್ಷದ ಬಾವುಟವನ್ನು ಇಂದು‌ ಅಧಿಕೃತವಾಗಿ‌ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ.

ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿದರು. ಹಸ್ತಲಾಘವ ಹೊಂದಿರುವ ಸಹಕಾರ ಮಾದರಿಯ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಲಾಗಿದೆ.

ಬಳಿಕ ಮಾತನಾಡಿದ ಅರುಣಾ ಲಕ್ಷ್ಮಿ, ‘ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕು. ಇದು ಜನಾರ್ದನ ರೆಡ್ಡಿಯವರ ಬಯಕೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ ಎಂದರು.

Join Whatsapp
Exit mobile version