ಕತಾರಿಗೆ ಔಷಧಿಗಳನ್ನು ಕೊಂಡೊಯ್ಯುತ್ತೀರಾ? ಎಚ್ಚರಿಕೆ !

Prasthutha: June 29, 2021

ಕತಾರಿಗೆ ಪ್ರಯಾಣಿಸುವವರು ಮತ್ತು ಕತಾರಿನಿಂದ ವಾಪಾಸ್ ತವರಿಗೆ ಮರಳುವವರು ಇನ್ನು ಮುಂದೆ ತಮ್ಮ ಸ್ವಯಂ ಬಳಕೆಯ ಔಷಧಿಗಳನ್ನು ಮಾತ್ರ ತಮ್ಮ ಜೊತೆ ತೆಗೆದುಕೊಂಡು ಹೋಗಬಹುದಾಗಿದೆ. ಕುಟುಂಬಿಕರಿಗೆ ಮತ್ತು ಆಪ್ತರ ಔಷಧಿಗಳನ್ನು ತೆಗೆದೆಕೊಂಡು ಹೋಗಲು ಅವಕಾಶವಿಲ್ಲ ಎಂದು ಕತಾರ್ ಆರೋಗ್ಯ ಸಚಿವಾಲಯ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ.

ಅದೇ ರೀತಿ ಸ್ವಯಂ ಬಳಕೆಯ ಔಷಧಿಗಳಿಗೂ ಅದಕ್ಕೆ ಸಂಬಂಧಿಸಿದ ವೈದ್ಯರ ಅಧಿಕೃತ ದಾಖಲೆಗಳನ್ನು ತೋರಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಮಾನಸಿಕ ಸಮಸ್ಯೆಯ ಔಷಧಿ ಅಥವಾ ಅದೇ ರೀತಿಯ ರೋಗಗಳಿಗೆ ಸಂಬಂಧಪಟ್ಟ ಯಾವುದಾದರೂ ಔಷಧಿ ಇದ್ದರೂ ಅದರಲ್ಲಿ ರೋಗಿಯ ಹೆಸರು, ಕಾಯಿಲೆ ವಿವರ, ಕಂಪನಿ ಹೆಸರು ಸಹಿತ ವಿಸ್ತೃತವಾಗಿ ಸ್ಪಷ್ಟ ದಾಖಲೆಗಳುಳ್ಳ ವೈದ್ಯರ ಪ್ರಿಸ್ಕ್ರಿಪ್ಶನ್ ಜೊತೆಗೆ ಇಟ್ಟುಕೊಳ್ಳಬೇಕು ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ 6 ತಿಂಗಳ ಕಾಲಾವಧಿ ಇರುತ್ತದೆ. ಪರಿಶೀಲನೆ ವೇಳೆ ಯಾರ ಬಳಿ ಔಷಧಿಗಳು ಪತ್ತೆಯಾಗುತ್ತದೋ ಅವರು ಅದಕ್ಕೆ ಜವಬ್ದಾರರಾಗಿರುತ್ತಾರೆ ಎಂದು ಕತಾರ್ ಆರೋಗ್ಯ ಸಚಿವಾಲಯ ತಿಳಿಸಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ