Home ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕೋವಿಡ್ ಗೈಡ್ಲೈನ್ಸ್ ಜಾರಿ | ಮತ್ತೆ ಪ್ರಾರಂಭಗೊಂಡ ಕಾರ್ಮಿಕರ ಸಾಮೂಹಿಕ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕೋವಿಡ್ ಗೈಡ್ಲೈನ್ಸ್ ಜಾರಿ | ಮತ್ತೆ ಪ್ರಾರಂಭಗೊಂಡ ಕಾರ್ಮಿಕರ ಸಾಮೂಹಿಕ ವಲಸೆ !

ಜಿಲ್ಲಾಧಿಕಾರಿಗಳ ಮನವೊಲಿಕೆ ಪ್ರಯತ್ನ ವಿಫಲ !

ಮಂಗಳೂರು : ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೊಸ ಗೈಡ್ ಲೈನ್ಸ್ ರಾತ್ರಿ 9 ರಿಂದ ಮುಂಜಾನೆ 6 ರವರೆಗೆ ನೈಟ್ ಕರ್ಫ್ಯೂ ಇಂದಿನಿಂದ ಜಾರಿಗೆ ಬಂದಿದೆ. ಈ ಕುರಿತು ನಿಗಾ ವಹಿಸಲು ದ.ಕ ಜಿಲ್ಲೆಯಲ್ಲಿ ಪೊಲೀಸರಿಂದ ಬಂದೋಬಸ್ತ್ ಕಾರ್ಯ ನಡೆಯಿತು.

ನೈಟ್ ಕರ್ಫ್ಯೂ ‌ಹಿನ್ನಲೆಯಲ್ಲಿ‌ ರಾಜ್ಯದ ಕರಾವಳಿಯ ಮಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇಂದು ರಾತ್ರಿ 9 ಗಂಟೆಯಿಂದಲೇ ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನ ಹಾಕಿ ಅನಗತ್ಯ ತಿರುಗಾಡುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಕಮೀಷನರ್ ಶಶಿಕುಮಾರ್ ರಸ್ತೆಗಿಳಿದು ನೈಟ್ ಕರ್ಫ್ಯೂ ಪರಿಶೀಲನೆ ನಡೆಸಿದ್ರು.


ಈ ವೇಳೆ ಮಂಗಳೂರು KSRTC ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಆವರು ಭೇಟಿ ಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಮತ್ತೊಮ್ಮೆ ಕಾರ್ಮಿಕರ ಸಾಮೂಹಿಕ ವಲಸೆ ಆರಂಭಗೊಂಡಿದೆ. ತಮ್ಮ ಊರುಗಳಿಗೆ ಹೊರಟಿದ್ದ ಕಾರ್ಮಿಕರನ್ನು ಜಿಲ್ಲಾಧಿಕಾರಿಗಳು ಬಸ್ ನಿಲ್ದಾಣದಲ್ಲೇ ಭೇಟಿ ಮಾಡಿ ಮಾತನಾಡಿಸಿದ್ದಾರೆ. ವಲಸೆ ಹೋಗುವವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಮಂಗಳೂರಿನ ಬಜಾಲಿನಲ್ಲಿ ಪೈಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಗದಗದ ಕಾರ್ಮಿಕನೋರ್ವನೊಂದಿಗೆ ಮಾತನಾಡಿದಾಗ, ‘ ನಾನು ಊರಿಗೆ ಹೋಗಿ ಏನಾದರೂ ಮಾಡಿ ಜೀವನ ಮಾಡ್ತೀನಿ’ ಎಂದು ಹೇಳಿದ್ದಾನೆ.

Join Whatsapp
Exit mobile version