ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಉತ್ತರಾಧಿಯನ್ನು ಸರ್ಕಾರ ಶೀಘ್ರದಲ್ಲೇ ನೇಮಿಸುವ ಸಾಧ್ಯತೆಯಿದೆ ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ತಿಳಿಸಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿರುವ ಎಂ ಎಂ ನರವಾಣೆ ಮಿಲಿಟರ್ ಮುಖ್ಯಸ್ಥರ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ರಕ್ಷಣಾತ್ಮಕ ಕಮಾಂಡರ್ ಪಡೆಗಳ ರಚನೆ ಮತ್ತು ಭೂಸೇನೆ, ವಾಯು ಮತ್ತು ನೌಕಾ ಸೇನೆಯನ್ನು ಯಶಸ್ವಿಯಾಗಿ ನಿಭಾಯಿಸುವುದರೊಂದಿಗೆ ಮಿಲಿಟರಿ ಸುಧಾರಣೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಜನರಲ್ ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯನ್ನು ಶೀಘ್ರದಲ್ಲೇ ನೇಮಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದೊಂದಿಗೆ ವಿವಾದಿತ ಗಡಿಯಲ್ಲಿ ಚೀನಾದ ಯುದ್ಧವನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ನೂತನ ರಕ್ಷಣಾ ಮುಖ್ಯಸ್ಥರನ್ನು ನೇಮಿಸುವ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಜನವರಿ 1, 2020 ರಂದು ದೇಶದ ಮೊದ CDS ಆಗಿ ಅಧಿಕಾರ ವಹಿಸಿಕೊಂಡ ಜನರಲ್ ರಾವತ್ ಅವರು ಬುಧವಾರ ತಮಿಳ್ನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದರು.