Home ಟಾಪ್ ಸುದ್ದಿಗಳು ನೂತನ ಮತಾಂತರ ತಡೆ ಕಾನೂನಿನಡಿ ಪ್ರಕರಣ | ಏಳು ಮಂದಿ ಬಂಧನ

ನೂತನ ಮತಾಂತರ ತಡೆ ಕಾನೂನಿನಡಿ ಪ್ರಕರಣ | ಏಳು ಮಂದಿ ಬಂಧನ

ಸೀತಾಪುರ : ಉತ್ತರ ಪ್ರದೇಶದಲ್ಲಿ ಹೊಸದಾಗಿ ಜಾರಿಗೊಂಡಿರುವ ಮತಾಂತರ ತಡೆ ಕಾನೂನಿನಡಿ ಏಳು ಮಂದಿ ಬಂಧಿತರಾಗಿದ್ದಾರೆ. ಹಿಂದೂ ಹುಡುಗಿಯನ್ನು ಅಪಹರಿಸಲಾಗಿದೆ ಎಂಬ ಆರೋಪದಲ್ಲಿ ಏಳು ಮಂದಿಯ ಬಂಧನವಾಗಿದೆ.

ಮುಖ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಸಂಬಂಧಿಕರನ್ನು ಬಂಧಿಸಲಾಗಿದೆ. ತನ್ನ ಮಗಳು ನಾಪತ್ತೆಯಾಗಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಜಬರಾಯಿಲ್ ಎಂಬಾತ ತಮ್ಮ ಮಗಳನ್ನು ಅಪಹರಿಸಿದ್ದಾನೆಂದು ದೂರು ನೀಡಲಾಗಿದೆ. ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂ ಹುಡುಗಿಯರನ್ನು ಮದುವೆಯಾಗುವ ಉದ್ದೇಶದಿಂದ ಬಲವಂತದ ಮತಾಂತರ ಮಾಡಲಾಗುತ್ತದೆ ಎಂದು ಆಪಾದಿಸುವ ಬಿಜೆಪಿಗರು, ಇದಕ್ಕೆ ‘ಲವ್ ಜಿಹಾದ್’ ಎಂಬ ಪದವನ್ನು ಸೃಷ್ಟಿಸಿದ್ದಾರೆ. ಈ ‘ಲವ್ ಜಿಹಾದ್’ ತಡೆಯುವ ಸಲುವಾಗಿ ನೂತನ ಬಲವಂತದ ಮತಾಂತರ ತಡೆ ಕಾಯ್ದೆ ತರಲಾಗಿದೆ ಎಂದು ಬಿಜೆಪಿಗರು ಹೇಳುತ್ತಾರೆ.

Join Whatsapp
Exit mobile version