ಕಂಡ್ಲೂರು: SDPI ಕಂಡ್ಲೂರು ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗೆ ನೂತನ ಆಂಬ್ಯುಲೆನ್ಸ್ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಹೇಲ್ ಮುಕ್ತೇಸರ್ ಅಧ್ಯಕ್ಷರು ಬೈಂದೂರು ವಿಧಾನ ಸಭಾ ಕ್ಷೇತ್ರ ಎಸ್.ಡಿ.ಪಿ.ಐ ಸಮಿತಿ ವಹಿಸಿದರು ಹಾಗೂ ಪ್ರಾಸ್ತಾವಿಕ ಭಾಷಣ ಲಿಯಾಕತ್ ಕಂಡ್ಲೂರು ನೆರೆವೆರಿಸಿ ಆಂಬ್ಯುಲೆನ್ಸ್ ಸೇವೆಯ ಮಾಹಿತಿ ಮತ್ತು ಸದುಪಯೋಗದ ಬಗ್ಗೆ ತಿಳಿಸಿದರು.
ಬಳಿಕ ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆಯನ್ನು ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ನೆರೆವೆರಿಸಿ ಮಾನವೀಯ ಸೇವೆ ಮತ್ತು ಜನಪರ ನೈಜ ರಾಜಕೀಯ ಮಾಡುಲು ಎಸ್.ಡಿ.ಪಿ.ಐ ನೊಂದಿಗೆ ಕೈಜೋಡಿಸಿ ದ್ವೇಷ ರಾಜಕೀಯಕ್ಕೆ ಸಮಾಜದಿಂದ ನಿರ್ಮೂಲನೆ ಮಾಡಬೇಕೆಂದು ಕರೆನೀಡಿದರು.
ಈ ಸಂಧರ್ಭದಲ್ಲಿ ಅಥಿತಿಗಳಾಗಿ ಆಗಮಿಸಿದ ಮೌಲಾನ ಉಬೆದುಲ್ಲಾ ಅಬುಬ್ಕರ್ ನದ್ವಿ ರವರು ಇಸ್ಲಾಂ ಧರ್ಮ ಸಮಾಜ ಮತ್ತು ಮಾನವೀಯ ಸೇವೆಗೆ ನೀಡುವ ಮಹತ್ವದ ಬಗ್ಗೆ ವಿವರಿಸಿದರು ಹಾಗೂ ಶಾಫೀ ಬೆಳ್ಳಾರೆ ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ಪರಿಹಾರದ ಕುರಿತು ವಿಶ್ಲೇಷಿದರು ಹಾಗೂ ಕಂಡ್ಲೂರು ಜಾಮೀಯಾ ಮಸೀದಿ ಖತೀಬರಾದ ಮೌಲಾನ ಇಲ್ಯಾಸ್ ನದ್ವಿ ಮಾನವೀಯ ಸೇವೆ ಕಾಲದ ಬೇಡಿಕೆ ಎಂಬ ಸಂದೇಶ ನೀಡಿದರು ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ.ತಮೀಮ್ ಮುಕ್ತೇಸರ್ (BDS,MDS & Pediatric Dentist ) ಮತ್ತು ಡಾ.ಲತಾ ನಾಯಕ್ (ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು) ರವರಿಗೆ ಸನ್ಮಾನ ಮಾಡಲಾಯಿತು ನಂತರ ಅಧ್ಯಕ್ಷ ಭಾಷಣ ಮಾಡಿದ ಸುಹೇಲ್ ಮುಕ್ತೇಸರ್ ಪಕ್ಷದ ಕಾರ್ಯ ಶೈಲಿಯ ಬಗ್ಗೆ ಮಾಹಿತಿ ನೀಡಿದರು ಕೊನೆಯದಾಗಿ ಧನ್ಯವಾದ ಕಾರ್ಯಕ್ರಮವನ್ನು ರಫೀಕ್ ಕಂಡ್ಲೂರು ಅಧ್ಯಕ್ಷರು ಎಸ್.ಡಿ.ಪಿ.ಐ ಕಂಡ್ಲೂರು ಗ್ರಾಮ ಸಮಿತಿ ನೆರೆವೆರಿಸಿದರು.