ವಾಷಿಂಗ್ಟನ್: ಟ್ವಿಟರ್ ನ ನೂತನ ಸಿಇಒ ಪರಾಗ್ ಅಗರ್ವಾಲ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ಅಮೆರಿಕದಲ್ಲಿ ಜನಾಂಗೀಯ ನೀತಿ ಮತ್ತು ಇಸ್ಲಾಮಾಫೋಬಿಯಾವನ್ನು ವಿರೋಧಿಸಿದ ಹಾಸ್ಯ ಕಲಾವಿದನ ಬಗ್ಗೆ 2010 ರಲ್ಲಿ ಪರಾಗ್ ಹಂಚಿಕೊಂಡಿದ್ದ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.
ಪರಾಗ್ ಆ ಸಮಯದಲ್ಲಿ ಟ್ವಿಟರ್ ನ ಉದ್ಯೋಗಿಯಾಗಿರಲಿಲ್ಲ. ” ಮುಸ್ಲಿಮರು ಮತ್ತು ಭಯೋತ್ಪಾದಕರ ನಡುವೆ ವ್ಯತ್ಯಾಸವನ್ನು ಅವರು ತೋರಿಸದಿದ್ದರೆ, ನಾನು ಬಿಳಿಯರು ಮತ್ತು ಜನಾಂಗೀಯವಾದಿಗಳ ನಡುವೆ ಏಕೆ ವ್ಯತ್ಯಾಸವನ್ನು ತೋರಿಸಬೇಕು” ಎಂದು ಅಗರ್ವಾಲ್ 2010ರ ಅಕ್ಟೋಬರ್ 26 ರಂದು ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ ಹೇಳಿದ್ದರು.
ಟ್ವಿಟರ್ನ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಅನಿರೀಕ್ಷಿತವಾಗಿ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದರಿಂದ ಭಾರತೀಯ ಸಂಜಾತ ಪರಾಗ್ ಅಗರ್ವಾಲ್ ಟ್ವಿಟರ್ ನ ನೂತನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.