Home ಟಾಪ್ ಸುದ್ದಿಗಳು ರಾಷ್ಟ್ರಪತಿಯವರಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ಬದಲು ನಟ ಪ್ರಸೇನ್ ಜೀತ್ ಫೋಟೊ ಅನಾವರಣ?

ರಾಷ್ಟ್ರಪತಿಯವರಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ಬದಲು ನಟ ಪ್ರಸೇನ್ ಜೀತ್ ಫೋಟೊ ಅನಾವರಣ?

ನವದೆಹಲಿ : ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸುಭಾಶ್ಚಂದ್ರ ಬೋಸ್ ಅವರ ಭಾವಚಿತ್ರದ ಬದಲು ಸಿನೆಮಾ ನಟರೊಬ್ಬರ ಚಿತ್ರ ಅನಾವರಣಗೊಳಿಸಲಾಗಿದೆ ಎಂದು ಸುದ್ದಿಯಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಭಾಶ್ಚಂದ್ರ ಬೋಸ್ ಅವರ ಭಾವಚಿತ್ರದ ಬದಲು ಸಿನೆಮಾ ನಟ ಪ್ರಸೇನ್ ಜೀತ್ ಚಟರ್ಜಿ ಅವರ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.

ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ರಾಷ್ಟ್ರಭವನದಲ್ಲಿ ನೇತಾಜಿಯ ಫೋಟೊವನ್ನು ಅನಾವರಣಗೊಳಿಸಿದ್ದಾರೆ. ಆದರೆ, ಅದು ನೇತಾಜಿಯ ಭಾವಚಿತ್ರ ಅಲ್ಲ. ಅದರು ಪ್ರಸೇನ್ ಜೀತ್ ಚಟರ್ಜಿ (ಬುಂಬಡ)ರವರು ನೇತಾಜಿಯಾಗಿ ನಟಿಸಿರುವ ಸಿನೆಮಾದ ಚಿತ್ರದ ಫೋಟೊ. ಶ್ರೀಜಿತ್ ಮುಖರ್ಜಿ ನಿರ್ದೇಶನದ ಗುಮ್ನಾಮಿ ಚಿತ್ರದ ಫೋಟೊ ಇದು ಎಂದು ಬಂಗಾಳದ ರಾಜಕೀಯ ವಿಶ್ಲೇಷಕ ಆದಿಲ್ ಹುಸೈನ್ ಎಂಬವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, “ಭಾರತವನ್ನು ದೇವರೇ ಕಾಪಾಡಬೇಕು, ಯಾಕೆಂದರೆ ಸರಕಾರದಿಂದ ಅದು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ನೇತಾಜಿಯವರ ಪಾತ್ರ ನಿರ್ವಹಿಸಿದ್ದ ನಟ ಪ್ರಸೇನ್ ಜೀತ್ ರ ಫೋಟೊ ರಾಷ್ಟ್ರಪತಿಗಳು ಅನಾವರಣಗೊಳಿಸಿದ ಸುದ್ದಿ ಕೇಳಿ ಆಘಾತವಾಯಿತು. ನಾನು ಇದನ್ನು ದೃಢಪಡಿಸಿಕೊಳ್ಳಲು ಎರಡೆರಡು ಬಾರಿ ಪರಿಶೀಲಿಸಿದೆ. ಎಷ್ಟೊಂದು ಮುಜುಗರ ತರುವಂತ ವಿಷಯ ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ಟ್ವೀಟ್ ಮಾಡಿದ್ದಾರೆ.  

ವಿಷಯಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.  

https://twitter.com/adilhossain/status/1353596794660245509
https://twitter.com/MahuaMoitra/status/1353607687724879873
https://twitter.com/BDUTT/status/1353620338702045185
Join Whatsapp
Exit mobile version