Home ಟಾಪ್ ಸುದ್ದಿಗಳು ನೇಪಾಳ | ನದಿಗೆ ಬಿದ್ದ ಭಾರತದ ಬಸ್: 11 ಮಂದಿ ಸಾವು

ನೇಪಾಳ | ನದಿಗೆ ಬಿದ್ದ ಭಾರತದ ಬಸ್: 11 ಮಂದಿ ಸಾವು

ಕಠ್ಮಂಡು: ಭಾರತದ ನೋಂದಣಿಯ ಬಸ್ಸೊಂದು ನೇಪಾಳದ ತನಹುನ್ ಜಿಲ್ಲೆಯ ಮಾರ್ಸಾಂಗ್ದಿ ನದಿಗೆ ಉರುಳಿದೆ. ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ.


ಬಸ್ ನಲ್ಲಿ 40 ಪ್ರಯಾಣಿಕರಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.


UP FT 7623 ನಂಬರ್ ನ ಬಸ್ ನದಿಗೆ ಉರುಳಿ, ದಡದಲ್ಲಿ ಬಿದ್ದಿದೆ ಎಂದು ಡಿಎಸ್ಪಿ ದೀಪಕ್ಕುಮಾರ್ ರಾಯಾ ಮಾಹಿತಿ ನೀಡಿದ್ದಾರೆ.


45 ಮಂದಿ ಸೇನಾ ಪೊಲೀಸರ ತಂಡ, ನೇಪಾಳ ವಿಪತ್ತು ನಿರ್ವಹಣಾ ತಂಡ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ 11 ಮೃತದೇಹಗಳು ದೊರಕಿವೆ ಎನ್ನುಲಾಗಿದೆ.

ಬಸ್ ನಲ್ಲಿದ್ದ ಪ್ರಯಾಣಿಕರು ಭಾರತದವರೋ ಅಥವಾ ನೇಪಾಳದವರೋ ಎನ್ನುವ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Join Whatsapp
Exit mobile version