ನೆಲ್ಯಾಡಿ: ಟಿಪ್ಪರ್, ಇಕೋ ಹಾಗೂ ಲಾರಿಯೊಂದರ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಈಕೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ನಡೆದಿದೆ.
ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ ನೆಲ್ಸನ್ (42) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಈಕೋ ಕಾರು ನೆಲ್ಯಾಡಿಯಿಂದ ಶಿರಾಡಿಗೆ ಹೋಗುತ್ತಿದ್ದು ಮಣ್ಣಗುಂಡಿಯಲ್ಲಿ ಕಲ್ಲಿದ್ದಲು ಸಾಗಾಟದ ಲಾರಿಯೊಂದನ್ನು ಓವರ್ ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ಗೆ ಡಿಕ್ಕಿಯಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.