Home ಟಾಪ್ ಸುದ್ದಿಗಳು ನೆಹರು ಕೆಲಸದಿಂದ ಖ್ಯಾತರಾಗಿದ್ದಾರೆ, ಹೊರತು ಹೆಸರಿನಿಂದ ಅಲ್ಲ: ರಾಹುಲ್ ಗಾಂಧಿ

ನೆಹರು ಕೆಲಸದಿಂದ ಖ್ಯಾತರಾಗಿದ್ದಾರೆ, ಹೊರತು ಹೆಸರಿನಿಂದ ಅಲ್ಲ: ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು (ಎನ್ಎಂಎಂಎಲ್) ಪ್ರಧಾನಮಂತ್ರಿ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂಎಂಎಲ್) ಎಂದು ಮರುನಾಮಕರಣ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ”ನೆಹರು ಅವರು ಮಾಡಿದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆಯೇ ಹೊರತು, ಅವರ ಹೆಸರಿಗಾಗಿ ಮಾತ್ರ ಅಲ್ಲ” ಎಂದು ಹೇಳಿದ್ದಾರೆ.


ಎರಡು ದಿನಗಳ ಲೇಹ್ ಭೇಟಿಗೆ ತೆರಳುವ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ”ನೆಹರು ಅವರ ಕಾರ್ಯಗಳು ಹೆಸರು ಮಾಡಿವೆ. ಆದರೆ ನೆಹರು ಅವರ ಹೆಸರಿಗಾಗಿ ಅಲ್ಲ” ಎಂದು ಹೇಳಿದರು.

Join Whatsapp
Exit mobile version