Home ಟಾಪ್ ಸುದ್ದಿಗಳು ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಫ್ ಇರಲಿಲ್ಲ, ಕಾಯ್ದೆ ಜಾರಿಗೆ ತಂದು ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು...

ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಫ್ ಇರಲಿಲ್ಲ, ಕಾಯ್ದೆ ಜಾರಿಗೆ ತಂದು ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು ನೆಹರು ಸರ್ಕಾರ: ಶೋಭಾ ಕರಂದ್ಲಾಜೆ

ವಿಜಯಪುರ: ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಪ್ ಕಾಯ್ದೆ ಬಗ್ಗೆ ಉಲ್ಲೇಖವೇ ಇಲ್ಲ. ಆದರೆ 1954-55 ರಲ್ಲಿ ನೆಹರು ಸರ್ಕಾರ ವಕ್ಪ್ ಕಾಯ್ದೆಯನ್ನು ಸಂವಿಧಾನಕ್ಕೆ ಸೇರಿಸಿ, ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರ‌ಂದ್ಲಾಜೆ ಅವರು ಸೋಮವಾರ ಹೇಳಿದರು.

ವಕ್ಫ್ ಮಂಡಳಿಯು ಅಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದ ಭಾಗವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ವಕ್ಫ್ ಕಾಯ್ದೆ ಜಾರಿಗೆ ತಂದು ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು ಎಂದು ಹೇಳಿದರು.

ಯಾವುದೇ ಜಮೀನು ವಕ್ಪ್ ನದ್ದಾಗುವುದಕ್ಕೆ ಸಾಧ್ಯವಿಲ್ಲ. ಇಲ್ಲಿನ ಮಠಗಳಿಗೆ ಚಾಲುಕ್ಯರು, ಹೊಯ್ಸಳರು, ಕಿತ್ತೂರು ರಾಣಿ ಚೆನ್ನಮ್ಮ ಜಮೀನು ಕೊಟ್ಟದ್ದು. ಆದರೆ, ಇಂತಹವನ್ನೂ ಜಮೀರ್ ಖಾನ್ ವಕ್ಪ್ ಮಾಡಿ ನೋಟಿಸ್ ಕೊಡಿಸಿದ್ದಾರೆ. ಒಂದು ರೀತಿಯಲ್ಲಿ ಮುಸ್ಲಿಮರ ಷರಿಯತ್ ಕಾನೂನನ್ನು ರಾಜ್ಯದಲ್ಲಿ ತರುವುದಕ್ಕೆ ಸಿದ್ದರಾಮಯ್ಯ ಹಾಗೂ‌ ಜಮೀರ್ ಹೊರಟಿದ್ದಾರೆ. ನಾವು ಭಾರತದ ಸಂವಿಧಾನದ ಪ್ರಕಾರ ನಡೆಯುವವರು. ಲೋಕಸಭೆಯಲ್ಲಿ ಸಂವಿಧಾನ‌ ಪ್ರತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕಾರ ಮಾಡುತ್ತೀರಿ. ಇಲ್ಲಿ ಬಂದು ಷರಿಯತ್ ಕಾನೂನು ತರುತ್ತೀರಿ. ಕರ್ನಾಟಕದಲ್ಲಿ ಇದು ನಡೆಯಲ್ಲ. ರಾಜ್ಯದಲ್ಲಿ ಹಲವಾರು ದೇವಸ್ಥಾನಗಳು ವಕ್ಪ್ ಎಂದಾಗಿವೆ. ಇದರ ಹಿಂದೆ ಯಾವ ರೀತಿಯ ಷಡ್ಯಂತ್ರ ಇದೆಯೆಂದು ಅರ್ಥವಾಗುತ್ತದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ರಾಜ್ಯದ ಎಲ್ಲ ಭೂಮಿಯನ್ನು ವಕ್ಪ್ ಅಡಿಯಲ್ಲಿ ತರಲು ಹೊರಟಿದ್ದಾರೆ. ಕಾನೂನು ಬಾಹಿರವಾಗಿ ವಕ್ಪ್ ಅದಾಲತ್ ಮಾಡುತ್ತಿದ್ದಾರೆ. ಇವರು ಯಾವ ಕಾನೂನು ಅಡಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ ಎಂದು ತಿಳಿಸಬೇಕಿದೆ. ರೈತರಿಗೆ ನೀಡಿದ್ದ ನೋಟಿಸ್ ರದ್ದು ಮಾಡಬೇಕು, ಪಹಣಿಯಲ್ಲಿ ನಮೂದಾಗಿರುವ ವಕ್ಪ್ ಬೋರ್ಡ್ ಹೆಸರು ತೆಗೆಯಬೇಕು ಎಂದು ಆಗ್ರಹಿಸಿದರು,

Join Whatsapp
Exit mobile version