►ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ
ಮಂಗಳೂರು: ಅಪಘಾತದಲ್ಲಿ ಸಣ್ಣಮಟ್ಟದಲ್ಲಿ ಆದ ಗಾಯವನ್ನು ಚಿಕಿತ್ಸೆ ಕೊಡಿಸುವ ವೈದ್ಯರು ನಿರ್ಲಕ್ಷ್ಯ ತೋರಿದ ಕಾರಣದಿಂದ ಹದಿನೇಳು ವರ್ಷದ ಫರ್ಹಾನ್ ಎಂಬ ಯುವಕನ ಸಾವಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮಂಗಳೂರು ಸಮೀಪದ ಮುಕ್ಕ ಬಳಿ ಸಂಭವಿಸಿದ ಅಪಘಾತದಲ್ಲಿ ಯುವಕನ ಕಾಲಿಗೆ ಸಣ್ಣಮಟ್ಟದ ಗಾಯವಾಗಿತ್ತು,”ಸುರತ್ಕಲ್ ನ ಅಥರ್ವ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಪ್ರಶಾಂತ್ ಮೋಹನ್ ರವರ ಸಲಹೆಯ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು”,ಅಪಘಾತದ ನಂತರವೂ ಕಾಲಿಗಾದ ಗಾಯ ಬಿಟ್ಟರೆ ಆರೋಗ್ಯವಾಗಿದ್ದ ಯುವಕ ಶಸ್ತ್ರ ಚಿಕಿತ್ಸೆಯ ನಂತರ ಮರಣ ಹೊಂದಲು ವೈದ್ಯರ ನಿರ್ಲಕ್ಷ್ಯ ಹಾಗೂ ಸಣ್ಣಮಟ್ಟದ ಚಿಕಿತ್ಸೆ ನೀಡುವ ಬದಲಿಗೆ ಹಣದಾಸೆಗೋಸ್ಕರ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೆಂದು ಹೇಳಿ ಅನಸ್ತೇಶಿಯಾ ಓವರ್ ಡೋಸ್ ನೀಡಿದ ಕಾರಣ ನೋವು ಉಲ್ಬಣಿಸಿದಾಗ ಇಲ್ಲಿಂದ ಕೆ.ಎಂ.ಸಿ ಗೆ ಕರೆದುಕೊಂಡು ಹೋಗಿ ಎಂದು ಹೇಳಿ ಮಧ್ಯದಲ್ಲಿ ಕೈಬಿಟ್ಟು ಯುವಕನ ಸಾವಿಗೆ ಕಾರಣವಾಗಿದ್ದಾರೆ.ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸಿ ಆಸ್ಫತ್ರೆಯ ಪರವಾನಗಿ ರದ್ದು ಪಡಿಸಬೇಕು ಮತ್ತು ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಹಾಗೂ ಯುವಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನವನ್ನು ಆಸ್ಫತ್ರೆಯ ಆಡಳಿತ ಮಂಡಳಿಯಿಂದ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ಜಾಸ್ಮಿನ್ ಎಂಬ ಯುವತಿಯ ಸಾವಾಗಿತ್ತು.ಆ ಸಂದರ್ಭದಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಇಂದು ಅದೇ ರೀತಿ ಪುನರಾವರ್ತನೆಯಾಗಿದೆ.
ಮುಂದೆ ಈ ರೀತಿ ಆಗದಂತೆ ತಡೆಯಲು ಜಿಲ್ಲಾಡಳಿತ ಮತ್ತು ಸರಕಾರ ಯಾರದೇ ಲಾಭಿಗೆ ಮಣಿಯದೆ ಇಂತಹ ವೈದ್ಯರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.