Home ಟಾಪ್ ಸುದ್ದಿಗಳು ಸೆಪ್ಟೆಂಬರ್ 7ರೊಳಗೆ ನೀಟ್-ಯುಜಿ ವೈದ್ಯಕೀಯ ಪ್ರವೇಶ ಫಲಿತಾಂಶ ಪ್ರಕಟ

ಸೆಪ್ಟೆಂಬರ್ 7ರೊಳಗೆ ನೀಟ್-ಯುಜಿ ವೈದ್ಯಕೀಯ ಪ್ರವೇಶ ಫಲಿತಾಂಶ ಪ್ರಕಟ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯ ಫಲಿತಾಂಶವನ್ನು ಸೆಪ್ಟೆಂಬರ್ 7 ರೊಳಗೆ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

ನೀಟ್ (ಯುಜಿ) – 2022 ರ ಕೀ ಉತ್ತರಗಳು, ಒಎಂಆರ್ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಚಿತ್ರವನ್ನು (ಆಗಸ್ಟ್ 30) ರೊಳಗೆ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ನೀಟ್ (ಯುಜಿ) – 2022 ರ ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ನೀಡಿದ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಒಎಂಆರ್ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಚಿತ್ರವನ್ನು ಸಹ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳು ಆಗಸ್ಟ್ 30 ರಿಂದ ಪ್ರತಿ ಉತ್ತರ ಕೀಗೆ 200 ರೂ ಮತ್ತು ಪ್ರತಿ ಪ್ರಶ್ನೆಗೆ 200 ರೂ.ಗಳ ವೆಚ್ಚದಲ್ಲಿ ಉತ್ತರ ಕೀ ಮತ್ತು ರೆಕಾರ್ಡ್ ಮಾಡಿದ ಪ್ರತಿಕ್ರಿಯೆ ಸವಾಲುಗಳಿಗೆ ಅರ್ಜಿ ಸಲ್ಲಿಸಬಹುದು ” ಎಂದು ಹಿರಿಯ ಎನ್ ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version