Home ಟಾಪ್ ಸುದ್ದಿಗಳು ನೀಟ್ ಪರೀಕ್ಷೆ ವೇಳೆ ಒಳಉಡುಪು ಕಳಚಿಸಿದ ಆರೋಪ: ಇನ್ನಷ್ಟು ವಿದ್ಯಾರ್ಥಿಗಳಿಂದಲೂ ದೂರು ದಾಖಲು; ಐವರ ಬಂಧನ

ನೀಟ್ ಪರೀಕ್ಷೆ ವೇಳೆ ಒಳಉಡುಪು ಕಳಚಿಸಿದ ಆರೋಪ: ಇನ್ನಷ್ಟು ವಿದ್ಯಾರ್ಥಿಗಳಿಂದಲೂ ದೂರು ದಾಖಲು; ಐವರ ಬಂಧನ

ಕೊಲ್ಲಂ: ನೀಟ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಒಳ ಉಡುಪು ಕಳಚಿ ಪರೀಕ್ಷೆ ಬರೆಯುವಂತೆ ಒತ್ತಾಯಪಡಿಸಿದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಮತ್ತೆ ನಾಲ್ವರು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದು, ಕೇರಳ ಪೊಲೀಸರು ಐವರು ಮಹಿಳೆಯರನ್ನು ಮಂಗಳವಾರ ಬಂಧಿಸಿದ್ದಾರೆ.

ಕೊಲ್ಲಂನ ಆಯೂರ್ನ ಮಾರ್ ಥಾಮಸ್ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಐವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ತನಿಖೆ ಉಸ್ತುವಾರಿ ವಹಿಸಿರುವ ಡಿಐಜಿ ಆರ್ ನಿಶಾಂತಿನಿ ತಿಳಿಸಿದ್ದಾರೆ.

“ಅವರಲ್ಲಿ ಮೂವರು ಹೊರಗಿನ ಸಂಸ್ಥೆಗೆ ಸೇರಿದ್ದು, ವಿದ್ಯಾರ್ಥಿಗಳ ತಪಾಸಣೆಗೆ ನಿಯೋಜನೆಗೊಂಡಿದ್ದರು. ಇನ್ನಿಬ್ಬರು ಪರೀಕ್ಷೆ ನಡೆದ ಸಂಸ್ಥೆಯ ಸಿಬ್ಬಂದಿಯಾಗಿದ್ದಾರೆ. ಘಟನೆಯಲ್ಲಿ ಅವರ ಪಾತ್ರವನ್ನು ತಿಳಿದುಕೊಳ್ಳಲು ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ” ಎಂದು ನಿಶಾಂತಿನಿ ಹೇಳಿದ್ದಾರೆ.

ಈ ಬಗ್ಗೆ , ತಾನು ಅನುಭವಿಸಿದ ಮಾನಸಿಕ ಯಾತನೆ ಮತ್ತು ಅವಮಾನವನ್ನು ಬಹಿರಂಗ ಪಡಿಸಿರುವ ವಿದ್ಯಾರ್ಥಿನಿ, ಅದು ನಿಜಕ್ಕೂ ತೀರಾ ಕೆಟ್ಟ ಅನುಭವ. ಅವರ ನಡವಳಿಕೆ ತುಂಬಾ ಒರಟಾಗಿತ್ತು ಮತ್ತು ಒಳಉಡುಪುಗಳನ್ನು ತೆಗೆಯಲು ಒತ್ತಾಯಿಸಿದ ನಂತರ ಅಳಲು ಪ್ರಾರಂಭಿಸಿದ ಹುಡುಗಿಯರನ್ನು ಅವರು ನಿರ್ಲಕ್ಷಿಸಿದರು. ನಮ್ಮನ್ನು ಕತ್ತಲೆ ಕೋಣೆಗೆ ಕರೆದೊಯ್ದು ಅಲ್ಲಿ ಬದಲಾಯಿಸಲು ಹೇಳಿದರು. ಅಲ್ಲಿ ಯಾವುದೇ ಗೌಪ್ಯತೆ ಇರಲಿಲ್ಲ. ಕೋವಿಡ್ -19 ಶಿಷ್ಟಾಚಾರದ ಹೊರತಾಗಿಯೂ, ಬಟ್ಟೆಗಳನ್ನು ಅನೈರ್ಮಲ್ಯ ರೀತಿಯಲ್ಲಿ ಒಟ್ಟಿಗೆ ಎಸೆಯಲಾಯಿತು” ಎಂದು ಹೇಳಿದ್ದಾಳೆ.

“ನಾವು ಪರೀಕ್ಷೆ ಬರೆಯುವಾಗ ಕೂದಲನ್ನು ಇಳಿಬಿಟ್ಟು ಎದೆ ಭಾಗ ಮುಚ್ಚಿಕೊಂಡಿದ್ದೆವು. ಏಕೆಂದರೆ ನಾವು ಶಾಲ್ ಗಳನ್ನು ಧರಿಸುವಂತೆ ಇರಲಿಲ್ಲ. ಅಲ್ಲಿ ಹುಡುಗರೂ ಪರೀಕ್ಷೆ ಬರೆದಿದ್ದರು. ಹೀಗಾಗಿ ಹುಡುಗಿಯರಿಗೆ ಬಹಳ ಕಷ್ಟ ಮತ್ತು ಮುಜುಗರ ಉಂಟಾಗುತ್ತಿತ್ತು” ಎಂದಿದ್ದಾಳೆ.

Join Whatsapp
Exit mobile version