ಹೊಸದಿಲ್ಲಿ: 2020ರಲ್ಲಿ ಎಕ್ಸ್’ಪ್ರೆಸ್ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 47,984 ಜನ ಸಾವನ್ನಪ್ಪಿದ್ದಾರೆ ಎಂದು ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದರು.
ಲೋಕಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ಮಾಹಿತಿ ನೀಡಿದ ಅವರು 2019ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 53,872 ಮಂದಿ ಅಸುನೀಗಿದ್ದಾರೆ ಎಂದು ತಿಳಿಸಿದ್ದಾರೆ.
ವಾಹನಗಳ ವಿನ್ಯಾಸ, ಸ್ಥಿತಿ, ರಸ್ತೆಗಳ ಪರಿಸ್ಥಿತಿ, ಅತಿವೇಗ, ಕುಡಿದು, ಮಾದಕ ದ್ರವ್ಯ ಸೇವಿಸಿ ಚಾಲನೆ, ಮೊಬೈಲ್ ಬಳಕೆ ಮೊದಲಾದವು ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಗಡ್ಕರಿ ಹೇಳಿದರು.
ರಸ್ತೆ ಸುರಕ್ಷತೆಗೆ ಎಲ್ಲಾ ಹಂತಗಳಲ್ಲಿ ತಜ್ಞರ ಸಹಾಯದಿಂದ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ ಎಂದು ಅವರು ಹೇಳಿದರು.